ರಜನಿಕಾಂತ್ ನಟಿಸುವ ಮತ್ತು ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಸಿನಿಮಾದಿಂದ ನಿರ್ದೇಶಕ ಸುಂದರ್ ಸಿ ಹೊರ ಬಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ರಜನಿಕಾಂತ್ 173ನೇ ಸಿನಿಮಾ ಘೋಷಿಸಲಾಯಿತು. ಈ ಸಿನಿಮಾವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮೂಲಕ ನಿರ್ಮಾಣ ಮಾಡಲಿತ್ತು. ಈ ಭಾರಿ ಬಜೆಟ್ ಚಿತ್ರದ ನಿರ್ದೇಶನವನ್ನು ಸೂಪರ್ ಹಿಟ್ ಸಿನಿಮಾಗಳ ನಿರ್ಮಾಪಕ ಸುಂದರ್ ಸಿ ಮಾಡಲಿರುವುದು ಘೋಷಿಸಲಾಗಿತ್ತು. ಚಿತ್ರತಂಡದ ಮುಹೂರ್ತವೂ ಅದ್ಧೂರಿಯಾಗಿ ನಡೆಯಿತು. ಆದರೆ ಇದೀಗ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ.
“ಕೆಲವು ಹೇಳಲಾಗದ, ಆದರೆ ತಪ್ಪಿಸಲು ಸಾಧ್ಯವಿಲ್ಲದ ಕಾರಣಗಳಿಂದ ನಾನು ರಜನಿಕಾಂತ್ ನಟಿಸುವ ಮತ್ತು ಕಮಲ್ ಹಾಸನ್ ನಿರ್ಮಾಣ ಮಾಡುವ ಸಿನಿಮಾದ ನಿರ್ದೇಶನ ಮಾಡಲು ಸಾಧ್ಯವಾಗುತ್ತಿಲ್ಲ. ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ ನನ್ನ ಹಳೆಯ ಅನುಬಂಧ ಸದಾ ನನ್ನ ನೆನಪಿನಲ್ಲಿ ಉಳಿಯಲಿದೆ. ಅವರ ಮಾರ್ಗದರ್ಶನವನ್ನು ಮುಂದೆಯೂ ಪಡೆಯುತ್ತೇನೆ. ಪ್ರಾಜೆಕ್ಟ್‌ಗಾಗಿ ಪರಿಗಣಿಸಿದ್ದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು. ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದರೆ ಕ್ಷಮೆ ಯಾಚಿಸುತ್ತೇನೆ.” ಎಂದು ಸುಂದರ್ ಸಿ ಸಿನಿಮಾದಿಂದ ಹೊರ ಬಂದಿರುವ ಬಗ್ಗೆ ಹೇಳಿದ್ದಾರೆ.
ಸುಂದರ್ ಸಿ ಓಲ್ಡ್ ಸ್ಕೂಲ್ ನಿರ್ದೇಶಕರಾಗಿದ್ದು, ಹೊಸ ತಲೆಮಾರಿಗೆ ತಕ್ಕಂತೆ ಸಿನಿಮಾ ಮಾಡಲಾಗುವುದಿಲ್ಲ ಎಂಬ ಅಕ್ಷೇಪ ವ್ಯಕ್ತಪಡಿಸುತ್ತಿದ್ದರು. ಈ ಮಧ್ಯೆ ಸುಂದರ್ ಅವರು ಸ್ಟಾರ್ ನಟರ ಸಿನಿಮಾದಿಂದ ಹೊರ ಬಂದಿದ್ದಾರೆ.
—–





Be the first to comment