ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕನ್ನು ಹೊಂಬಾಳೆ ಮ್ಯೂಸಿಕ್ ಖರೀದಿ ಮಾಡಿದೆ.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗೆ ಟೈಟಲ್ ಹಾಗೂ ಪೋಸ್ಟರ್ ನಿಂದ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚು ಮಾಡಿರುವ ‘ದೇವಿ ಮಹಾತ್ಮೆ’ ಚಿತ್ರದ ಹಾಡುಗಳು ಮಾರಾಟವಾಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.
‘ದೇವಿ ಮಹಾತ್ಮೆ’ ಚಿತ್ರಕ್ಕೆ ನಾಗರಾಜ ಸೋಮಯಾಜಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮರ್ಯಾದೆ ಪ್ರಶ್ನೆ ಸಿನಿಮಾ ಬಳಿಕ ನಾಗರಾಜ ಸೋಮಯಾಜಿ ಅವರ ಸಾರಥ್ಯದಲ್ಲಿ ಮೂಡಿಬರ್ತಿರುವ ಚಿತ್ರ ಇದಾಗಿದೆ. ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ, ಗುರು ಆರ್ಯ, ವಾದಿರಾಜ ಶೆಟ್ಟಿ ಬರವಣಿಗೆ, ಎಸ್ ಕೆ ರಾವ್ ಛಾಯಾಗ್ರಹಣ, ಲಿಕಿತ್ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಸಿನಿಮಾಗಿದೆ.
ಯುವಿಜಿ ಸ್ಟುಡಿಯೋ ಬ್ಯಾನರ್ ನಡಿ ವಿದ್ಯಾ ಗಾಂಧಿರಾಜನ್ ‘ದೇವಿ ಮಹಾತ್ಮೆ’ ಸಿನಿಮಾಗೆ ಬಂಡವಾಳ ಹಾಡಿದ್ದಾರೆ. ಗಾಂಧಿರಾಜನ್ ಸಾಥ್ ಕೊಟ್ಟಿದ್ದಾರೆ.





Be the first to comment