ಖ್ಯಾತ ಗೀತರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
‘ಕವಿರತ್ನ ಸಾರ್ಥಕ ಸುವರ್ಣ’ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಟೀಸರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟೀಸರ್‌ನಲ್ಲಿ ನಾಗೇಂದ್ರ ಪ್ರಸಾದ್ ಅವರ ಪಾತ್ರ ಮತ್ತು ರಾಜಕೀಯ ಹಿನ್ನೆಲೆಯನ್ನು ಮಾತ್ರ ಪರಿಚಯಿಸಿ ಕಥೆಯ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಕನ್ನಡ ಭಾಷೆ, ಸಮಾಜ ಮತ್ತು ರಾಜಕೀಯವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಸೋಶಿಯೋ-ಪೊಲಿಟಿಕಲ್ ಲಿಂಗ್ವಿಸ್ಟಿಕ್ ಡ್ರಾಮಾ ಚಿತ್ರವನ್ನು ಗುರುಪ್ರಸಾದ್ ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ಬಿವಿಎಂ ಕ್ರಿಯೇಷನ್ಸ್, ಡಿಎಲ್‌ವಿ ಪ್ರೊಡಕ್ಷನ್ಸ್ ಹಾಗೂ ಅನಿಕೇತನ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಬಿ. ಶಿವಶಂಕರ್, ದತ್ತಾತ್ರೇಯ ಜಮಾದಾರ್ ಮತ್ತು ಶಶಿಪ್ರಸಾದ್ ಚಂದ್ರಶೇಖರ್ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದು, ಶೃತಿ ವಾಲೆ ಸಹ ನಿರ್ಮಾಪಕರಾಗಿದ್ದಾರೆ.
ದೇವರ ಹೆಸರಿನಲ್ಲಿ ಪ್ರಮಾಣ ಮಾಡುವ ನಾಯಕನ ಬದುಕಿನಲ್ಲಿ ನಡೆಯುವ ಬದಲಾವಣೆಗಳು ಹಾಗೂ ಸಮಾಜದ ಮೇಲೆ ಅದರ ಪರಿಣಾಮ ಚಿತ್ರದ ಪ್ರಮುಖ ಕಥಾಹಂದರವಾಗಿದೆ. ಚಿತ್ರದ ಎರಡು ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ವೈಜನಾಥ್ ಬಿರಾದಾರ್, ಡಿಂಪನ ಜೀವನ್, ಅಶ್ವಿತಾ ಹೆಗಡೆ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ಶ್ರೀನಾಥ್ ವಶಿಷ್ಠ, ಶ್ರೀನಿವಾಸ್ ಪ್ರಭು, ಕಲಾಮಾಧ್ಯಮ ಪರಮೇಶ್ವರ್, ಅಂಕಿತಾ ಗೌಡ, ದತ್ತಾತ್ರೇಯ ಜಮಾದಾರ್, ಮಾವಳ್ಳಿ ಕಾರ್ತಿಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
—–





Be the first to comment