ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು ಬಿಡುಗಡೆ ಆಗಿದ್ದು, ರಾಜಕೀಯಕ್ಕೆ ಎಂಟ್ರಿ ಕೊಡುವ ಇಂಗಿತವನ್ನು ದರ್ಶನ್ ಸಿನಿಮಾ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಡೆವಿಲ್’ ಸಿನಿಮಾನಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವ ಕತೆ ಇದೆ. ನಿಮಾನಲ್ಲಿ ಅವರು ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕದ ಸಿಎಂ ಆಗಿದ್ದಾರೆ. ಸಿನಿಮಾ ಮೂಲಕ ಮನದಾಸೆಯನ್ನು ದರ್ಶನ್, ಅಭಿಮಾನಿಗಳ ಹಾಗೂ ರಾಜ್ಯದ ಜನರ ಮುಂದಿಟ್ಟಿದ್ದಾರೆ ಎಂಬ ಅನುಮಾನ ಮೂಡಿದೆ.
ತಮಿಳುನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಟ ವಿಜಯ್ ಅವರ ಹೆಜ್ಜೆಯನ್ನೇ ದರ್ಶನ್ ಅನುಸರಿಸಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡುವ ಮೊದಲು ರಾಜಕೀಯ ವಿಷಯಗಳುಳ್ಳ ಸಿನಿಮಾಗಳಲ್ಲಿ ನಟಿಸಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಟೀಕೆ ಮಾಡಿದ್ದರು. ರಾಜಕೀಯ ಅಜೆಂಡಾವನ್ನು ಸಿನಿಮಾಗಳಲ್ಲಿ ಸೇರಿಸಿದ್ದರು. ದರ್ಶನ್ ಅದೇ ಹಾದಿಯಲ್ಲಿ ಇದ್ದಂತೆ ತೋರುತ್ತಿದೆ.
ಈಗ ‘ದರ್ಶನ್ ಮುಂದಿನ ಸಿಎಂ’ ಎಂದು ಅಭಿಮಾನಿಗಳು ಹೊಸ ಆರ್ಭಟ ಎಬ್ಬಿಸಿದ್ದಾರೆ. ದರ್ಶನ್ ತಾವು ರಾಜಕೀಯಕ್ಕೆ ಬರುವ ಸುಳಿವನ್ನು ನೀಡಿದ್ದು, ಅಭಿಮಾನಿಗಳ ಉತ್ಸಾಹಕ್ಕೆ ಕಾರಣವಾಗಿದೆ.
ದರ್ಶನ್ ಅವರ ಸಹೋದರ ದಿನಕರ್, ದರ್ಶನ್ ರಾಜಕೀಯಕ್ಕೆ ಬರಬಹುದು ಎಂಬರ್ಥದ ಉತ್ತರ ಪರೋಕ್ಷವಾಗಿ ನೀಡಿದ್ದಾರೆ.
‘ಅಭಿಮಾನಿಗಳು ಕೇಳಿದರೆ ಖಂಡಿತ ದರ್ಶನ್ ರಾಜಕೀಯಕ್ಕೆ ಬರುತ್ತಾರೆ’ ಎಂದಿದ್ದಾರೆ.
—–





Be the first to comment