ಮೃತ್ಯುದೇವತೆ

Movie Review: ಪ್ರೇಮ ವಂಚಿತೆಯ ಮತ್ತೊಂದು ಮುಖವೇ ಮೃತ್ಯುದೇವತೆ

ಚಿತ್ರ: ಮೃತ್ಯುದೇವತೆ
ನಿರ್ದೇಶನ: ನವೀನ್ ಮಹಾದೇವ್
ನಿರ್ಮಾಣ: ನವೀನ್ ಮಹಾದೇವ್
ತಾರಾಗಣ: ಮಹಿನ್ ಕುಬೇರ್, ಸಾರಿಕಾ ರಾವ್, ಡಯಾನ ಜೆಸ್ಸಿಕಾ, ಹಿಮಾ ಮೋಹನ್, ನವೀನ್ ಮಹಾದೇವ್ ಮುಂತಾದವರು…
ರೇಟಿಂಗ್ : 3.5/5

ಆರತಿ ಡೋರ್ ಡೆಲಿವರಿ ವೃತ್ತಿಯಲ್ಲಿರುವ ಸುಂದರಿ. ಆಕೆಗೊಬ್ಬ ಪ್ರಿಯಕರ. ಪರಸ್ಪರ ಮುದ್ದಿನಿಂದ ಬೇಬಿ ಎಂದೇ ಕರೆದುಕೊಳ್ಳುವ ಆತ್ಮೀಯತೆ. ಆಕೆಯ ಆಪ್ತ ಸ್ನೇಹಿತೆ ದೀಪಾ. ದೀಪಾಗೂ ಒಬ್ಬ ಪ್ರಿಯಕರನಿರುತ್ತಾನೆ. ಹೀಗೆ ಪರಿಚಿತರಾದ ನಾಲ್ವರು ಒಮ್ಮೆ ಒಂದು ರೆಸಾರ್ಟ್ ಗೆ ಹೋಗುವ ಪ್ಲ್ಯಾನ್ ಹಾಕುತ್ತಾರೆ. ಆಮೇಲೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ.

ಆರತಿ ಪಾತ್ರವನ್ನು ಸಾರಿಕಾ ರಾವ್ ನಿರ್ವಹಿಸಿದ್ದಾರೆ. ಸಾರಿಕಾ ಅವರಿಗೆ ಇದರಲ್ಲಿ ವೈವಿಧ್ಯಮಯವಾದ ಭಾವಗಳನ್ನು ತೋರುವ ಅವಕಾಶ ಲಭಿಸಿದೆ. ಮೊದಲು ಮುದ್ದು ಪ್ರೇಯಸಿಯಾಗಿ, ಆನಂತರ ವಂಚನೆಗೊಳಗಾದ ಬಳಿಕ ಸಿಡಿದೇಳುವ ಯುವತಿಯಾಗಿ, ಆ್ಯಕ್ಷನ್ ಕ್ವೀನ್ ಆಗಿ, ದೇವತೆಯಾಗಿ.. ಹೀಗೆ ವಿವಿಧ ವೇಷ, ಭಾವಗಳಲ್ಲಿ ಕಾಣಿಸಿದ್ದಾರೆ. ದೀಪಾ ಪಾತ್ರಧಾರಿ ಡಯಾನ ಜೆಸ್ಸಿಕಾ ಕೂಡ ಪ್ರೀತಿ, ಸಂಕಷ್ಟ, ಪ್ರತಿಕಾರದ ಪ್ರತಿರೂಪವಾಗಿ ಕಾಣಿಸಿದ್ದಾರೆ. ಇವರಿಬ್ಬರನ್ನು ಪ್ರೇಮಿಸುವ ಮತ್ತು ಕಥೆಗೆ ತಿರುವು ಸೃಷ್ಟಿಸುವವರಾಗಿ ಮಹಿನ್ ಕುಬೇರ್ ಮತ್ತು ಮಧುಸೂರ್ಯ ನಟಿಸಿದ್ದಾರೆ.

ಈ ಚಿತ್ರಕ್ಕೆ ಎರಡು ಟ್ರ್ಯಾಕ್ ಗಳಿವೆ. ಎರಡನೆಯದರಲ್ಲಿ ಮಲೆಮದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಮನೆಯ ಕಥೆ ಇದೆ. ನಾಟಿಕೋಳಿ ಮಾದೇವನ ಮನೆ. ಆತನ ತಾಯಿ ಪರಮ ದೈವಭಕ್ತೆ, ಸಾದ್ವಿ. ಆದರೆ ಪುತ್ರರತ್ನನಿಗೆ ಇಲ್ಲದ ದುಶ್ಚಟಗಳೇ ಇಲ್ಲ. ಈ ನಾಟಿಕೋಳಿ ಮಾದೇವನ ಪಾತ್ರ ಕೂಡ ಕಥೆಯ ಅಂತ್ಯಕ್ಕೆ ಪ್ರಾಮುಖ್ಯತೆ ತಂದುಕೊಡುತ್ತದೆ. ಮಾದೇವನಾಗಿ ಖುದ್ದು ನಿರ್ದೇಶಕ ನವೀನ್ ಮಹಾದೇವ್ ನಟಿಸಿದ್ದಾರೆ. ಮೊದಲ ಚಿತ್ರದಲ್ಲೆ ಆಕರ್ಷಕ ಅಭಿನಯ ನೀಡಿದ್ದಾರೆ. ಮಾದೇವನ ತಾಯಿಯಾಗಿ ವಿನಯಾ ಪ್ರಸಾದ್ ನಟಿಸಿದ್ದಾರೆ. ಮಾದೇವನ ಅತ್ತೆ ಮಗಳು ಸಂಧ್ಯಾ ಪಾತ್ರವನ್ನು ಹಿಮಾ ಮೋಹನ್ ಮಾಡಿದ್ದಾರೆ. ಈ ಜೋಡಿಯ ಹಾಡು ಹಾಗೂ ದೇವಿಯ ಹಾಡು ಆಕರ್ಷಕವಾಗಿದೆ.

ಸಿನಿಮಾದ ಪೂರ್ತಿ ದೃಶ್ಯಗಳು ಬೆಂಗಳೂರು ಮತ್ತು ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ನಡೆಯುವಂತೆ ತೋರಿಸಲಾಗಿದೆ. ಕಾಡಿನ ದೃಶ್ಯಗಳನ್ನು ರಾತ್ರಿಯ ಬೆಳಕಿನಲ್ಲಿಯೂ ಆಕರ್ಷಕವಾಗಿ ಚಿತ್ರೀಕರಿಸಲಾಗಿದೆ. ವಯಸ್ಕರ ಚಿತ್ರವಾದರೂ ಯುವ ಪ್ರೇಮಿಗಳಿಂದ ಹಿಡಿದು ಹಿರಿಯ ನಾಗರಿಕರ ತನಕ ಚಿತ್ರವನ್ನು ನೋಡಿ ಎಂಜಾಯ್ ಮಾಡುವಂತೆ ಮೂಡಿಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!