ಚಿರಂಜೀವಿಗೆ ಚಿತ್ರ ನಿರ್ಮಾಣ ಮಾಡಲು ಮುಂದಾದ ಕೆವಿಎನ್ 

ಮೆಗಾ ಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರದ ಮುಹೂರ್ತ ಹೈದ್ರಾಬಾದ್‌ನಲ್ಲಿ ನೆರವೇರಿದೆ.

ರಾಕಿಂಗ್ ಸ್ಟಾರ್ ಯಶ್ ಜೊತೆ ಟಾಕ್ಸಿಕ್, ಧ್ರುವ ಜೊತೆ ಕೆಡಿ,  ವಿಜಯ್ ಜೊತೆ ಜನನಾಯಗನ್ ಸಿನಿಮಾ ಮಾಡಿರುವ ಕೆವಿಎನ್  ನಿರ್ಮಾಣ ಸಂಸ್ಥೆ  ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೈ ಜೋಡಿಸಿದೆ. ಚಿರು ಸಹೋದರ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮೆಗಾಸ್ಟಾರ್ ಗೆ ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ಮಾಡಿದ್ದ ಬಾಬಿ ಕೊಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ. ಬಹುಕೋಟೆ ಬಜೆಟ್ ನಲ್ಲಿ  ಕೆವಿಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ.

ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ. ಇತ್ತೀಚೆಗಷ್ಟೇ ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್‌ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು  ಹಂಚಿಕೊಂಡಿದ್ದರು. ಅಭಿಮಾನಿಗಳು ಈ ವಿಡಿಯೋ ನೋಡಿ ಸಂತಸಪಟ್ಟಿದ್ದಾರೆ.

ದಕ್ಷಿಣ ಭಾರತದ ದೊಡ್ಡ ಸ್ಟಾರ್ ನಟರಿಗೆ ಚಿತ್ರ ನಿರ್ಮಿಸಿರುವ ಕೆವಿಎನ್ ಸಂಸ್ಥೆ ಈಗ ಚಿರಂಜೀವಿ ಅವರಿಗೆ ಚಿತ್ರ ನಿರ್ಮಾಣ ಮಾಡಲು ಮುಂದಾಗುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!