ವರನಟ ಡಾ. ರಾಜಕುಮಾರ್ ಅವರ ಸಮಾಧಿಯ ವಿಚಾರದಲ್ಲಿ ತಾನು ಹೇಳಿರುವ ವಿಚಾರಗಳು ಸತ್ಯವಾಗಿವೆ. ಆದರೆ ಈ ವಿಚಾರದಲ್ಲಿ ದಬ್ಬಾಳಿಕೆಯನ್ನು ಸಹಿಸುವುದಿಲ್ಲ ಎಂದು ನಟ ಚೇತನ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಾನು ಹೇಳಿದ ವಿಚಾರ ಸುಳ್ಳಲ್ಲ. ಕ್ಷಮೆ ಕೇಳಿಸಲು ಬಂದು ಒತ್ತಡ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಆಗಿದೆ. ನನ್ನ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಾನು ಎದುರಿಸಲು ಸಿದ್ಧ” ಎಂದು ಹೇಳಿದರು.
“ನಾನು ಹೇಳಿದ್ದರಲ್ಲಿ ಸತ್ಯ ಇದೆ. ನಾನು ಪ್ರಚಾರಕ್ಕಾಗಿ ಮಾತನಾಡಿಲ್ಲ. ಇದು ನೀತಿ ಮತ್ತು ತತ್ವದ ಪ್ರಶ್ನೆ” ಎಂದು ಹೇಳಿದ್ದಾರೆ.
“ಸರ್ಕಾರ ಒಬ್ಬ ವ್ಯಕ್ತಿಗೆ ಜಾಗ ನೀಡಿದರೆ, ಇತರರಿಗೆ ನ್ಯಾಯ ಸಿಗುವುದಿಲ್ಲ. ಇದು ಚಿತ್ರರಂಗದಲ್ಲಿ ಅಸಮಾನತೆ ಉಂಟುಮಾಡುತ್ತದೆ. ಯಾವುದೇ ರೀತಿಯ ಗೂಂಡಾ ವರ್ತನೆ ಅಥವಾ ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಚೇತನ್ ಅಹಿಂಸಾ ಅವರು ರಾಜ್ ಕುಮಾರ್ ಸಮಾಧಿಗೆ ಸರ್ಕಾರ ನೀಡಿದ 2.5 ಎಕರೆ ಜಾಗದ ಬಗ್ಗೆ ಪ್ರಶ್ನೆ ಎತ್ತಿದ್ದು, ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳಲ್ಲಿ ಆಕ್ರೋಶ ಹುಟ್ಟಿಸಿತ್ತು.
ತಮ್ಮ ಹೇಳಿಕೆ ಸಮರ್ಥನೆ ಮಾಡುವ ಮೂಲಕ ಚೇತನ್ ಮತ್ತೆ ಆ ವಿಷಯವನ್ನು ಜೀವಂತ ಇಟ್ಟಿದ್ದಾರೆ.





Be the first to comment