“ಅಕ್ಕಮಹಾದೇವಿ” ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ

ಭರತ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ “ಶ್ರೀ ಜಗನ್ಮಾತೆ ಅಕ್ಕಮಹಾದೇವಿ” ಚಿತ್ರಕ್ಕೆ ಹಂಸಲೇಖ ಸ್ಟುಡಿಯೋವಿನಲ್ಲಿ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಸುಮಾರು ೯೦೦ ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ರಚಿಸಿ, ನಿರ್ಮಾಪಕರಾಗಿ ನಿರ್ದೇಶನ ಮಾಡುತ್ತಿದ್ದಾರೆ-ವಿಷ್ಣ್ಣುಕಾಂತ್.ಬಿ.ಜೆ, ಛಾಯಾಗ್ರಹಣ-ರವಿ ಸುವರ್ಣ, ಸಂಗೀತ-ಆರ್.ಪಳನಿ ಸೇನಾಪತಿ, ನಿರ್ವಹಣೆ-ರಂಗಸ್ವಾಮಿ, ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಶ್ರೀ.ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರ ೨೧ ವಚನಗಳಿಗೆ ನಿರ್ದೇಶಕ ವಿಷ್ಣುಕಾಂತ್ ರಚಿಸಿರುವ ೩ ಗೀತೆಗಳು ಲೈವ್ ವಾದ್ಯಗಳೊಂದಿಗೆ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ. ವಿಷ್ಣುಕಾಂತ್, ಸುರಕ್ಷಾ, ಭವ್ಯ, ಬಿರಾದರ್, ಎಂ.ಪಾಟೀಲ್ ಮುಂತಾದವರಿದ್ದಾರೆ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಚಿತ್ರೀಕರಣ, ಶಿವಮೊಗ್ಗ, ಬೀದರ್, ಮಂಗಳೂರು, ಶ್ರೀಶೈಲ, ಹಿಮಾಲಯ ಆಯ್ಕೆಯಾಗಿರುವ ಸ್ಥಳಗಳು.

Be the first to comment

Leave a Reply

Your email address will not be published. Required fields are marked *

Translate »
error: Content is protected !!