ಜೀ಼ ಕನ್ನಡದಲ್ಲಿ ಸೋಮವಾರದಿಂದ ಶನಿವಾರದವರೆಗೆ ಧಾರಾವಾಹಿ ಪ್ರಸಾರ

ಕನ್ನಡ ದಜನಪ್ರಿಯ ಕಿರುತೆರೆ ವಾಹಿನಿ ಜೀ಼ ಕನ್ನಡದಲ್ಲಿ ಇದೀಗ ಸೋಮವಾರದಿಂದ ಶನಿವಾರದವರೆಗೆ ಆರೂ ದಿನಗಳು ಧಾರಾವಾಹಿಗಳು ಪ್ರಸಾರವಾಗಲಿವೆ. ಆರು ವಾರಗಳ ಸೀರಿಯಲ್ಥ್ರಿಲ್ಪ್ರಾರಂಭಿಸಿರುವ ಜೀ಼ ಕನ್ನಡ ಇನ್ನು ಮುಂದೆ ಎಲ್ಲ ಧಾರಾವಾಹಿಗಳನ್ನು ಶನಿವಾರದಂದೂ ಪ್ರಸಾರ ಮಾಡಲಿದೆ.

ಸೋಮವಾರದಿಂದ ಶನಿವಾರದವರೆಗೆ ಸಂಜೆ 7ರಿಂದ ರಾತ್ರಿ 10.30ರವರೆಗೆ ಕಮಲಿ, ಪಾರು, ಗಟ್ಟಿಮೇಳ, ಜೊತೆ ಜೊತೆಯಲಿ, ನಾಗಿಣಿ 2, ಯಾರೇ ನೀ ಮೋಹಿನಿ, ಬ್ರಹ್ಮಗಂಟು ,ಈ ಎಲ್ಲ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗಲಿವೆ. ಈ ಜನಪ್ರಿಯ ಧಾರಾವಾಹಿಗಳೊಂದಿಗೆ ಮತ್ತಷ್ಟು ಹೊಸ ಧಾರಾವಾಹಿಗಳನ್ನು ಜೀ಼ ಕನ್ನಡ ಪ್ರಾರಂಭಿಸಲಿದೆ.

ಕನ್ನಡದಲ್ಲಿ ಸೀರಿಯಲ್ಸಿ ಕ್ಸರ್ಹೊಸ ಶಕೆ  ಪ್ರಾರಂಭಿಸಿರುವ ಜೀ಼ ಕನ್ನಡ ವಾಹಿನಿಯ ಪ್ರಯತ್ನವನ್ನು ವೀಕ್ಷಕರು ಖಂಡಿತ ಸ್ವಾಗತಿಸುತ್ತಾರೆ ಎಂಬ ಭರವಸೆ ಹೊಂದಿದೆ. ಧಾರಾವಾಹಿ ವೀಕ್ಷಕರಿಗೆ ಪ್ರತಿನಿತ್ಯ ಧಾರಾವಾಹಿ ವೀಕ್ಷಿಸದೇ ಇದ್ದಲ್ಲಿ ನೆಮ್ಮದಿಯೇ ಇರುವುದಿಲ್ಲ. ತಮ್ಮಅಚ್ಚುಮೆಚ್ಚಿನ ಧಾರಾವಾಹಿಗಳನ್ನು ವಾರಾಂತ್ಯದಲ್ಲಿ ಮಿಸ್ಮಾಡಿಕೊಳ್ಳುತ್ತಿದ್ದ ವೀಕ್ಷಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ಇನ್ನು ಮುಂದೆ ವಾರದ ಆರೂ ದಿನಗಳು ಭರಪೂರ ಮನರಂಜನೆಯನ್ನು ಜೀ಼ ಕನ್ನಡ ವೀಕ್ಷಕರು ಪಡೆಯಬಹುದಾಗಿದೆ. ಲಾಕ್ಡೌನ್ನಂತರ ಧಾರಾವಾಹಿಗಳ ಸಮಯ ಬದಲಾಗಿದ್ದರೂ ಎಲ್ಲ ಧಾರಾವಾಹಿಗಳನ್ನುವೀಕ್ಷಕರು ಅಪಾರ ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ.

ಜೀ಼ ಕನ್ನಡದ ಧಾರಾವಾಹಿಗಳು ವೀಕ್ಷಕರ ಮನಸ್ಸಿಗೆ ಅನುಗುಣವಾಗಿರುವುದಲ್ಲದೆ ಅದಕ್ಕೆ ತಕ್ಕಂತಹ ಸಾಮಾಜಿಕ ಪ್ರಸ್ತುತ ಧಾರಾವಾಹಿಗಳನ್ನು ತಂದಿದೆ. ಆನ್ಲೈನ್ಮಾಧ್ಯಮದಲ್ಲೂ ಜೀ಼ ಕನ್ನಡ ಸದ್ದು ಜೋರಾಗಿದ್ದು ಇತ್ತೀಚೆಗೆ ಜೊತೆ ಜೊತೆಯಲಿ ಧಾರಾವಾಹಿಯ ಶೀರ್ಷಿಕೆ ಗೀತೆ ಒಂದು ಕೊಟಿಗೂ ಮೀರಿ ಯುಟ್ಯೂಬ ವಿಕ್ಷಣೆ ಕಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!