‘ಜೊತೆ ಜೊತೆಯಲಿ’ ಶೀರ್ಷಿಕೆ ಟ್ರ್ಯಾಕಿನ ಕಾಲರ್ ಟ್ಯೂನ್ ಬಿಡುಗಡೆ

ಜೀ಼ ಕನ್ನಡದ ಹೊಚ್ಚ ಹೊಸ ಧಾರವಾಹಿ ‘ಜೊತೆ ಜೊತೆಯಲಿ’ ಶೀರ್ಷಿಕೆ ಟ್ರ್ಯಾಕಿನ ಕಾಲರ್ ಟ್ಯೂನ್ ಬಿಡುಗಡೆ

ಕರ್ನಾಟಕದ ನಗರ ಮತ್ತು ಗ್ರಾಮೀಣ ಮಾರುಕಟ್ಟೆಯಲ್ಲಿ ನಂಬರ್ ೧ ಸ್ಥಾನ ಪಡೆದಿರುವ ಜೀ಼ ಕನ್ನಡ ವಾಹಿನಿ ಎಲ್ಲ ಕನ್ನಡಿಗರ ಮನೆ ಮಾತಾಗಿದೆ. ತನ್ನ ಉತ್ಕಟ ವೀಕ್ಷಕರಿಗೆ ಜೀ಼ ಕನ್ನಡ ನೀಡಿರುವ ಇತ್ತೀಚಿನ ಮನರಂಜನೆಯ ಉಡುಗೊರೆ – ‘ಜೊತೆ ಜೊತೆಯಲಿ’. ವಯಸ್ಸು, ಅಂತಸ್ತು, ಜೀವನ ಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರ ಇರುವ ಈ ಜೋಡಿಯ ಪ್ರೇಮಕಥೆಯೇ ಈ ಧಾರಾವಾಹಿಯ ಹೂರಣ. ತಪ್ಪದೆ ವೀಕ್ಷಿಸಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಗೆ ನಿಮ್ಮ ನೆಚ್ಚಿನ ಜೀ಼ ಕನ್ನಡ ಮತ್ತು ಜೀ಼ ಕನ್ನಡ ಎಚ್ ಡಿ ಯಲ್ಲಿ.

ಶುರುವಾದ ಮೊದಲನೆಯ ವಾರದಲ್ಲೇ 11.5 TVR ಹಾಗೂ ಶೇ. 171ರಷ್ಟು ಪ್ರಗತಿ ಪಡೆದು, ಜೊತೆ ಜೊತೆಯಲಿ ಇನ್ನು ಹಲವು ಪ್ರಥಮಗಳನ್ನು ಸಾಧಿಸಲು ಹೊರಟಿದೆ. ಕನ್ನಡ ಕಿರುತೆರೆಯಲ್ಲಿ, ಇದೆ ಮೊಟ್ಟ ಮೊದಲನೆಯ ಬಾರಿ, ಪ್ರೇಕ್ಷಕರ ಒತ್ತಾಯದ ಮೇರೆಗೆ ಜೊತೆ ಜೊತೆಯಲಿ ಟೈಟಲ್ ಟ್ರ್ಯಾಕನ್ನು ಏರ್ಟೆಲ್, ಐಡಿಯಾ, ವೊಡಾಫೋನ್ ಹಾಗೂ ಬಿಎಸ್ಎನ್ಎಲ್ ಟೆಲಿಕಾಂ ಸೇವೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಜನಪ್ರಿಯ ಟ್ರ್ಯಾಕನ್ನು ಶೀಘ್ರದಲ್ಲೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಬಿಡುಗಡೆ ಮಾಡಲಾಗುವುದು.

ಚಾನೆಲ್‌ನ ಸಾಮಾಜಿಕ ತಾಣಗಳಲ್ಲಿ ಈ ಧಾರಾವಾಹಿಯ ಅಸಾಧಾರಣ ಕಥಾಹಂದರವನ್ನು ಅಭಿಮಾನಿಗಳು ಭಾರಿ ಮಾತ್ರದಲ್ಲಿ ಮೆಚ್ಚಿದ್ದಾರೆ. ಜೀ಼ ಕನ್ನಡದ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಧಾರಾವಾಹಿಯ ಶೀರ್ಷಿಕೆ ಹಾಡು ಅತ್ಯಂತ ವೈರಲ್ ಆಗಿದೆ.

ಕೆಳಗಿನ ವಿವರಗಳೊಂದಿಗೆ ಅಭಿಮಾನಿಗಳು ಅತ್ಯಂತ ಜನಪ್ರಿಯವಾದ ಜೊತೆ ಜೊತೆಯಲಿ ಕಾಲರ್ ಟ್ಯೂನ್ ಟ್ರ್ಯಾಕನ್ನು ಪಡೆಯಬಹುದು:

ಟ್ರ್ಯಾಕ್ ಸಂಖ್ಯೆ- 1 ಆಲ್ಬಮ್ ಹೆಸರು- ಜೊತೆ ಜೊತೆಯಲಿ ಟ್ರ್ಯಾಕ್ ಹೆಸರು- ಜೊತೆ ಜೊತೆಯಲಿ ಭಾಷೆ- ಕನ್ನಡ

Be the first to comment

Leave a Reply

Your email address will not be published. Required fields are marked *

Translate »
error: Content is protected !!