ಬೆಂಗಳೂರಿನಲ್ಲಿ ಸೈಟ್ ಅಥವಾ ಮನೆ ಖರೀದಿಸುವವರಿಗೆ ಸುವರ್ಣಾವಕಾಶ – ‘ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋ’

ಬೆಂಗಳೂರಿನ ಅತಿದೊಡ್ಡ ರಿಯಲ್ ಎಸ್ಟೇಟ್ ಎಕ್ಸ್​ಪೋ ಎಂದೇ ಪರಿಗಣಿಸಲ್ಪಟ್ಟಿರುವ, ಬಹು ನಿರೀಕ್ಷಿತ ‘ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋ’ಗೆ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್​​ನಲ್ಲಿ ಶುಕ್ರವಾರ ಚಾಲನೆ ದೊರೆತಿದೆ. ನವೆಂಬರ್ 20ರಿಂದ 3 ದಿನಗಳ ಕಾಲ ಎಕ್ಸ್​ಪೋ ನಡೆಯಲಿದೆ.

ಮನೆ ಕೊಳ್ಳುವ ಕನಸು ಕಾಣುತ್ತಿರುವವರಿಗೆ ಒಂದೇ ಸೂರಿನಡಿ ಅಪಾರ್ಟ್‌ಮೆಂಟ್, ವಿಲ್ಲಾ, ಪ್ಲಾಟ್, ಫಾರ್ಮ್‌ಲ್ಯಾಂಡ್ ಸೇರಿದಂತೆ ನೂರಾರು ಪ್ರಾಜೆಕ್ಟ್‌ಗಳನ್ನು ನೋಡುವ, ಪ್ರಮುಖ ಬಿಲ್ಡರ್‌ಗಳೊಂದಿಗೆ ನೇರವಾಗಿ ಮಾತನಾಡುವ, ಹೋಂ ಲೋನ್ ಸೌಲಭ್ಯ, ಕಾನೂನು ಮಾಹಿತಿ ಮತ್ತು ಎಕ್ಸ್​ಪೋಗೆ ಮಾತ್ರ ಸಿಗುವ ವಿಶೇಷ ಆಫರ್‌ಗಳು ಹಾಗೂ ಡಿಸ್ಕೌಂಟ್‌ಗಳನ್ನು ಪಡೆಯುವ ಅವಕಾಶ ಇಲ್ಲಿ ಸಿಗುತ್ತದೆ.

ಹೊಸ ಮನೆ ಖರೀದಿ ಮಾಡಬೇಕು ಅಂದುಕೊಂಡವರಿಗೆ ಸರಿಯಾದ ಬಿಲ್ಡರ್ ಆಯ್ಕೆ ಮಾಡಲು, ಬೆಲೆ ಹೋಲಿಕೆ ಮಾಡಲು ಮತ್ತು ಎಲ್ಲಾ ಮಾಹಿತಿಯನ್ನು ಒಂದೇ ಜಾಗದಲ್ಲಿ ಪಡೆಯಲು ‘ಟಿವಿ9 ಸ್ವೀಟ್ ಹೋಮ್ ಎಕ್ಸ್​ಪೋ’ ಅತ್ಯುತ್ತಮ ವೇದಿಕೆಯಾಗಿದೆ

ಮುಖ್ಯಾಂಶಗಳು

* ಯಶಸ್ವಿಯಾಗಿ ಟಿವಿ 9 17 ನೇ ವರ್ಷದ ಎಕ್ಸ್‌ಪೋ
* ನವೆಂಬರ್ 20 ರಿಂದ 22 ರವರೆಗೆ 3 ದಿನಗಳ ನಂದಿ ಲಿಂಕ್ ಮೈದಾನ ಮೈಸೂರು ರಸ್ತೆ

* ಲಕ್ಕಿ ಡಿಪ್‌ನಲ್ಲಿ ಅದ್ಭುತ ಉಡುಗೊರೆಗಳನ್ನು ಗೆಲ್ಲುವ ಅವಕಾಶ
* ⁠ವಿಲ್ಲಾಗಳು, ಪ್ಲಾಟ್‌ಗಳು, ಅಪಾರ್ಟ್‌ಮೆಂಟ್‌ಗಳು, ಸೈಟ್ ಖರೀದಿಯ ಮೇಲೆ ವಿಶೇಷ ಕೊಡುಗೆಗಳು

Be the first to comment

Leave a Reply

Your email address will not be published. Required fields are marked *

Translate »
error: Content is protected !!