ಗ್ರಾಮೀಣ ಸೊಗಡಿನ ಕಥೆಯ ‘ಪ್ರೇಮದ ಊರಲಿ’ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.
‘ಜೈಲರ್ 2’ ಮತ್ತು ‘ರಾಮಾಯಣ’ದಂತಹ ದೊಡ್ಡ ಸಿನಿಮಾಗಳ ಬಿಡುಗಡೆಯ ನಡುವೆಯೂ ‘ಪ್ರೇಮದ ಊರಲಿ’ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನ ಮುಂದುವರಿಸಿದೆ. ನವೆಂಬರ್ 12ರವರೆಗಿನ ಬಾಕ್ಸ್ ಆಫೀಸ್ ವರದಿಯ ಪ್ರಕಾರ 49 ದಿನಗಳಲ್ಲಿ ಚಿತ್ರ ಜಾಗತಿಕವಾಗಿ 138.36 ಕೋಟಿ ರೂಪಾಯಿ ಗಳಿಕೆ ದಾಖಲಿಸಿದೆ.
ದೊಡ್ಡ ತಾರಾಬಳಗ, ಭಾರೀ ಬಜೆಟ್ ಇಲ್ಲದಿದ್ದರೂ ಗಟ್ಟಿಯಾದ ಕಥೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಬಲ್ಲದು ಎಂಬುದಕ್ಕೆ ‘ಪ್ರೇಮದ ಊರಲಿ’ ಉದಾಹರಣೆಯಾಗಿದೆ. ಸರಳ ಕಥೆ ಮತ್ತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. 50 ದಿನಗಳ ಸಂಭ್ರಮ ಚಿತ್ರತಂಡಕ್ಕೆ ಸಂತಸ ತಂದಿದೆ.
ಮೊದಲ ದಿನ ಕೇವಲ 60 ಶೋಗಳ ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ‘ಪ್ರೇಮದ ಊರಲಿ’ ಸಿನಿಮಾ, ಮೌತ್ ಟಾಕ್ ಕಾರಣದಿಂದ ಪ್ರದರ್ಶನಗಳನ್ನು ಹೆಚ್ಚಿಸಿಕೊಳ್ಳುತ್ತಾ 100 ಕೋಟಿ ಕ್ಲಬ್ ಸೇರಿದೆ.
ಮನೋಜ್ ಕುಮಾರ್ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರದಲ್ಲಿ ಶ್ರೀ ರಾಮ್, ತಪಸ್ವಿನಿ ಪೂಣಚ್ಚ ಮತ್ತು ರಾಮಿಕಾ ಶಿವು, , ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿ ಸೊಗಡಿನ, ತಂದೆ-ಮಗನ ಬಾಂಧವ್ಯದ ಕಥೆ, ಸುನಾದ್ ಗೌತಮ್ ಅವರ ಸಂಗೀತ ಕುಟುಂಬ ಸಮೇತ ಜನರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
—-





Be the first to comment