ಸುನಾಮಿ ಎಬ್ಬಿಸಿದ ‘ರಾಮಾಯಣ’

ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ  ‘ರಾಮಾಯಣ: ಭಾಗ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ.

ಸಿನಿಮಾ ಬಿಡುಗಡೆಯಾದ 5ನೇ ದಿನವಾದ ಸೋಮವಾರ ‘ರಾಮಾಯಣ 1’ ಭಾರತದಲ್ಲಿ  107.50 ಕೋಟಿ ಕಲೆಕ್ಷನ್ ಮಾಡಿದೆ. ‘ರಾಮಾಯಣ 1’ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’  ಹೆಸರಲ್ಲಿದ್ದ ದಾಖಲೆಯನ್ನು ಧೂಳೀಪಟ ಮಾಡಿದೆ. ಈ ಮೂಲಕ ಮೊದಲ ಸೋಮವಾರ 100 ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದ ಎರಡನೇ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ.

5 ದಿನಗಳ ಅಂತ್ಯಕ್ಕೆ ವಿಶ್ವಾದ್ಯಂತ ಒಟ್ಟು  663.90 ಕೋಟಿ ಕಲೆಕ್ಷನ್ ಮಾಡಿದೆ. ಭಾರತದ ಒಟ್ಟು ಗಳಿಕೆ 413.90 ಕೋಟಿ. ಬಿಡುಗಡೆಯಾದ ದಿನದಿಂದ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಸೋಮವಾರದ ಕಲೆಕ್ಷನ್ ಬಾಲಿವುಡ್ ಹಾಗೂ ಸ್ಯಾಂಡ್‌ವುಡ್ ನಲ್ಲೂ ಅಚ್ಚರಿ ಮೂಡಿಸಿದೆ.

4,000 ಕೋಟಿ ಬೃಹತ್ ಬಜೆಟ್‌ನಲ್ಲಿ ಸಿದ್ಧವಾಗಿರುವ  ‘ರಾಮಾಯಣ: ಭಾಗ 1’ ಸಿನಿಮಾಕ್ಕೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸಿನಿಮಾ ಇನ್ನಷ್ಟು  ದಾಖಲೆಗಳನ್ನು ಬರೆಯುವ ಮುನ್ಸೂಚನೆ ನೀಡಿದೆ. ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!