ವಿವೇಕ್ ಸಿಂಹ, ಸಂಪ್ರತಿ ಆಳ್ವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿರೀಕ್ಷಿತ ಅತಿಥಿಗಳು ಚಿತ್ರ ಈಗ ಅಮೆಜಾನ್ ಪ್ರೈಮ್‌ನಲ್ಲಿ ಸ್ತ್ರೀಮಿಂಗ್ ಆಗುತ್ತಿದೆ.
ಈ ಚಿತ್ರವನ್ನು ಮನೋಜ್ ಅಣ್ಣಯ್ಯ ಅವರು ನಿರ್ದೇಶಿಸಿದ್ದಾರೆ. ಯುವ ಜೋಡಿ ಗೆಸ್ಟ್ ಹೌಸಿಗೆ ಹೋದಾಗ ಅಲ್ಲಿ ಒಂದು ಗುಂಪಿನಿಂದ ನಡೆಯುವ ದೌರ್ಜನ್ಯದ ಘಟನೆ ಈ ಚಿತ್ರದಲ್ಲಿದೆ. ಶ್ರೀರಾಮ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.
ಚಿತ್ರವನ್ನು ವಿನೋದ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಅವರು ಚಿಕ್ಕ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಇತರ ಪಾತ್ರಗಳಲ್ಲಿ ಹರಿತಾ ಶಾ, ದೈವಿಕ್, ಶ್ರೀದತ್ತ, ದಯಾ ಪಲ್ಲವಕೆರೆ ಇದ್ದಾರೆ.
ಚಿತ್ರಮಂದಿರಗಳಲ್ಲಿ ಚಿತ್ರ ವೀಕ್ಷಣೆ ಮಾಡಿದವರು ಮನೆಯಲ್ಲಿ ಓಟಿಟಿಯಲ್ಲಿ ಚಿತ್ರ ವೀಕ್ಷಣೆ ಮಾಡಬಹುದು.





Be the first to comment