ರಕ್ಷಿತಾ ಶೆಟ್ಟಿ ಮತ್ತೆ ಬಿಗ್‌ಬಾಸ್ ಗೆ ಎಂಟ್ರಿ

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ತಮ್ಮ ವಿಭಿನ್ನ ಆಟ,  ವ್ಯಕ್ತಿತ್ವದಿಂದ ಗಮನ ಸೆಳೆದಿದ್ದ ರಕ್ಷಿತಾ ಶೆಟ್ಟಿ ಮತ್ತೆ ಬಿಗ್‌ಬಾಸ್ 13ನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಸೀಸನ್‌ನಲ್ಲಿ ರನ್ನರ್ ಅಪ್ ಆಗಿದ್ದ ರಕ್ಷಿತಾ ಶೆಟ್ಟಿ  ಅವರನ್ನು ಸ್ಪರ್ಧಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಡೆಯುತ್ತಿರುವ ‘ಶೆಟ್ಟಿ ಡಾನ್’ ಸ್ವಯಂವರ ಟಾಸ್ಕ್‌ನ ಭಾಗವಾಗಿ ರಕ್ಷಿತಾ ಶೆಟ್ಟಿ ಆಗಮಿಸಿದ್ದಾರೆ.

ರಕ್ಷಿತಾ ಶೆಟ್ಟಿ ಅವರ ಆಗಮನದ ಪ್ರೋಮೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅವರ ಎಂಟ್ರಿಯಿಂದ ಮನೆಯೊಳಗೆ ಹೊಸ ಸಂಭ್ರಮ ಶುರುವಾಗಿದೆ.  ಈ ಬಾರಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರಾ ಅಥವಾ ಮತ್ತೊಮ್ಮೆ ಸ್ಪರ್ಧಿಯಾಗಿ ಆಟಕ್ಕೆ ಇಳಿಯಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಬಿಗ್‌ಬಾಸ್ ಮನೆಯಲ್ಲಿ ‘ಶೆಟ್ಟಿ ಡಾನ್’ ಹೆಸರಿನ ವಿಶೇಷ ಮದುವೆ ಟಾಸ್ಕ್ ನಡೆಯುತ್ತಿದೆ. ಮನೆಯ ಕ್ಯಾಪ್ಟನ್ ಸೌಂದರ್ಯ ಶೆಟ್ಟಿ ಅವರಿಗೆ ವರ ಹುಡುಕುವ ಸನ್ನಿವೇಶವನ್ನು ಟಾಸ್ಕ್‌ನಲ್ಲಿ ಸೃಷ್ಟಿಸಲಾಗಿದೆ. ಇದಕ್ಕಾಗಿ ಸ್ಪರ್ಧಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ.  ರಕ್ಷಿತಾ ಶೆಟ್ಟಿ ಅವರನ್ನು ಸೌಂದರ್ಯ ಶೆಟ್ಟಿ ಅವರ ತಂಗಿ ಎಂಬ ಪಾತ್ರದಲ್ಲಿ ಪರಿಚಯಿಸಲಾಗಿದೆ.

ಸ್ವಯಂವರ ಟಾಸ್ಕ್‌ನಲ್ಲಿ ನಡೆಯುತ್ತಿದ್ದ ಮಾತಿನ ಚಕಮಕಿ ಮತ್ತು ಮನರಂಜನೆಯ ನಡುವೆ ರಕ್ಷಿತಾ ಅವರ ಪ್ರವೇಶ ಹೊಸ ತಿರುವು ನೀಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!