ಶೂನ್ಯ’ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ‘ಲಾರ್ಡ್ ಗಾಗ’ ಶೀರ್ಷಿಕೆ ಅನಾವರಣ ಆಗಿದೆ.
‘ಪರಿಶುದ್ಧವಾದ ಅಹಂಕಾರ ಲಭ್ಯ’ (Lord Gaaga – Purest form of ego available) ಎನ್ನುವ ಅಡಿಬರಹ ಇದಕ್ಕಿದೆ. ‘ಲಾರ್ಡ್ ಗಾಗ’ ಚಿತ್ರದ ಟೈಟಲ್ ವಿಚಿತ್ರ ಮತ್ತು ವಿಶೇಷತೆಯಿಂದ ಕೂಡಿದೆ. ತಲೆ, ಮೆದುಳು, ಒಂದು ಗಂಡು ಮತ್ತು ಮತ್ತೊಂದು ಹೆಣ್ಣಿನ ಚಪ್ಪಲಿಯನ್ನು ಇಟ್ಟು, ‘ಪರಿಶುದ್ಧ ಅಹಂಕಾರ ಲಭ್ಯ’ ಎನ್ನುವ ಅಡಿಬರಹವಿಟ್ಟಿರುವುದು ವಿಶಿಷ್ಟವಾಗಿದೆ. ಉಪ್ಪಿ ಸಿನಿಮಾಗಳ ಶೈಲಿಯ ಈ ಟೈಟಲ್ ಚಿಂತನೆಗೆ ಹಚ್ಚುವಂತಿದ್ದು ಉಳಿದ ವಿಷಯಗಳನ್ನು ಪ್ರೇಕ್ಷಕರ ಊಹೆಗೆ ಬಿಟ್ಟಿದೆ ಚಿತ್ರತಂಡ.
ಸಿನಿಮಾದಂತೆ ಮಾಡಿರುವ ಟೈಟಲ್ ಅನಾವರಣ ವಿಡಿಯೋ ಪ್ರೋಮೋದಲ್ಲಿ ಸಿನಿಮಾವನ್ನೇ ಆಮ್ಲಜನಕದಂತೆ ಉಸಿರಾಡುವ ನಾಯಕನಿಂದ ಹಿಡಿದು, ಬಕೆಟ್ಗಟ್ಟಲೆ ಕಥಾವಸ್ತುಗಳನ್ನು ಹೊತ್ತು ತಂದಿರುವ ನಿರ್ದೇಶಕ ಹಾಗೂ ಕಿರುಚಿತ್ರ ನಿರ್ಮಿಸಿ ಗ್ಲೂಕೋಸ್ ಬಾಟಲಿ ಹಾಕಿಸಿಕೊಂಡಿರುವ ನಿರ್ಮಾಪಕನವರೆಗಿನ ಸ್ವಾರಸ್ಯ ಮಜವಾಗಿದೆ. ಮುಂದುವರಿದು ರಕ್ಷಿತ್ ಶೆಟ್ಟಿ, ಲೂಸಿಯಾ ಪವನ್, ಉಪೇಂದ್ರ, ಕಾಶಿನಾಥ್ ಹಾಗೂ ‘ಕಾಂತಾರ’ ರಿಷಬ್ ಶೆಟ್ಟಿಯವರ ಸಿನಿಮಾ ಚರ್ಚೆ ‘ಲಾರ್ಡ್ ಗಾಗ’ ಟೈಟಲ್ ಅನಾವರಣಕ್ಕೊಂದು ಅರ್ಥ ನೀಡುತ್ತದೆ.
ಚೈತ್ರಾ ಜೆ. ಆಚಾರ್ ಹಾಗೂ ತಾರಕ್ ಪೊನ್ನಪ್ಪ ಅಭಿನಯದ ‘ಗಿಲ್ಕಿ’ ಚಿತ್ರವನ್ನು ನಿರ್ದೇಶಿಸಿದ್ದ ವೈ.ಕೆ. ಚಿತ್ರದ ನಿರ್ದೇಶಕರು. ‘ಝೀರೋ ಗ್ರಾವಿಟಿ ಫಿಲಂ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ‘ಮುಕಿ’ ಈ ಚಿತ್ರವನ್ನು ನಿರ್ಮಿಸಿದ್ದಾರೆ.
—–





Be the first to comment