ಸೆ.25ರಂದು ‘ಕಾಮನ್ ಮ್ಯಾನ್’ ತೆರೆಗೆ

ಸಾಮಾನ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸಬಹುದು? ಏನೆಲ್ಲ ಸುಧಾರಣೆ ಮಾಡಬಹುದು? ಎದುರಿಸುವ ಸವಾಲುಗಳೇನು ಎಂದು ಹೇಳುವ ‘ಕಾಮನ್ ಮ್ಯಾನ್’ ಚಿತ್ರ ಇದೇ ತಿಂಗಳ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಡಾ. ಎನ್.‌ನರಸಿಂಹ ಮೂರ್ತಿ ಕಥೆ ಬರೆದು ಸುರಭಿ ಫಿಲಂಸ್ ಅಡಿ‌  ಚಿತ್ರವನ್ನು ನಿರ್ಮಿಸಿದ್ದಾರೆ‌. ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ‘ಕಾಮನ್ ಮ್ಯಾನ್’. ಕೆರೆಬೇಟೆ ಖ್ಯಾತಿಯ ಗೌರಿಶಂಕರ್ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ಟ್ರೈಲರ್‌ ಬಿಡುಗಡೆಗೊಳಿಸಿ ಮಾತನಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್, ‘ಟ್ರೈಲರ್ ನೋಡಿದಾಗ ಪ್ರೇಕ್ಷಕರಲ್ಲಿ ಸಹಜವಾಗಿ  ಕೌತುಕ ಮೂಡುತ್ತದೆ. ‘ವಿಧಾನಸೌಧದ ಮೇಲೆ ನನಗೂ ಹಕ್ಕಿದೆ. ಅದನ್ನು ನನಗೆ ಬರೆದುಕೊಡಿ’ ಎಂದು ಸಾಮಾನ್ಯ ಪ್ರಜೆಯೊಬ್ಬ ಕೇಳುವ ಅಂಶವೇ ಹೊಸದಾಗಿದೆ. ಈ ಚಿತ್ರದ ಕಥಾವಸ್ತು ಹಾಗೂ ಟ್ರೈಲರ್‌ನಲ್ಲಿ ಜನರನ್ನು ಥಿಯೇಟರ್‌ಗೆ ಸೆಳೆಯುವ ಗಟ್ಟಿತನವಿದೆ. ಈ ಚಿತ್ರದಿಂದ ಗೌರಿಶಂಕರ್‌ ಅವರ ಹೆಸರು ಗೌರಿಶಂಕರ ಪರ್ವತದಷ್ಟು ಎತ್ತರಕ್ಕೆ ಬೆಳೆಯಲಿ. ಈ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣಲಿ’ ಎಂದು ಶುಭ ಹಾರೈಸಿದರು.

ಗೌರಿಶಂಕರ್  ಮಾತನಾಡಿ, ‘ಪ್ರತಿ ಮನುಷ್ಯನಲ್ಲೂ ಒಂದು ಆಸೆ ಅನ್ನೋದಿರುತ್ತೆ. ಅದೇ ರೀತಿ ಒಬ್ಬ ಕಾಮನ್ ಮ್ಯಾನ್ ಸಿಎಂ ಆಗಿ ಏನು ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು.

ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರ ಮಾಡಿದ್ದಾರೆ. ಬಲ ರಾಜ್ ವಾಡಿ ರಂಗಭೂಮಿ ಕಲಾವಿದನ ಪಾತ್ರ,   ಕಿರಣ್  ಚಿತ್ರದಲ್ಲಿ ಸಿಎಂ ಮಗನಾಗಿ ಪಾತ್ರ ಮಾಡಿದ್ದಾರೆ. ಹಿರಿಯ ನಟರಾದ ರಮೇಶ್ ಭಟ್, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು  ಇತರರು ನಟಿಸಿದ್ದಾರೆ.

ವಿನಯ ಚಂದ್ರ ಅವರ ಸಂಗೀತ, ಜೆ‌.ಜಿ. ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್   ಹಾಡುಗಳಿಗೆ ದನಿಯಾಗಿದ್ದಾರೆ.

 

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!