ಉತ್ತರ ಕನ್ನಡ ಜಿಲ್ಲೆಯ ನೆಲದ ಕಥೆಯನ್ನು ಸಾರುವ ‘ಕಾನ್ಧಾರಿ’ ಚಿತ್ರ ಸೆ. 18ಕ್ಕೆ ತೆರೆಗೆ ಬರಲು ಸಜ್ಜಾಗಿದೆ.
1801 ರಿಂದ 2026ರ ವರೆಗಿನ ಮೂರು ಕಾಲಘಟ್ಟದ ಕಥೆಯನ್ನು ಸಾರುವ ’ಕಾನ್ಧಾರಿ’ ಚಿತ್ರದ ಟ್ರೇಲರ್ ನ್ನು ಹಿರಿಯ ನಟ ದೊಡ್ಡಣ್ಣಬಿಡುಗಡೆ ಮಾಡಿದರು. ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ಐಎಎಸ್ ಅಧಿಕಾರಿ ಸಂಜಯ ಶೆಟ್ಟನ್ನವರ್, ಇತಿಹಾಸಕಾರ ಹಾಗೂ ಚಿತ್ರಕ್ಕೆ ಮಾಹಿತಿ ಒದಗಿಸಿರುವ ಲಕ್ಷೀಶ ಸೊಂದಾ ಔಪಚಾರಿಕವಾಗಿ ವಿಷಯಗಳನ್ನು ಹಂಚಿಕೊಂಡರು.
ದೊಡ್ಡಣ್ಣ ಮಾತನಾಡಿ, ”ಒಂದು ಮುತ್ತಿನ ಕಥೆ’ ಚಿತ್ರೀಕರಣ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೋಗಿದ್ದುಂಟು. ಆಗ ಅಲ್ಲಿಯ ಜನರ ಗುಣ, ಸಂಸ್ಕ್ರತಿ ಕಂಡು ಖುಷಿಯಾಗಿತ್ತು. ಮತ್ತೆ ಅಲ್ಲಿಗೆ ಹೋಗುವ ಅವಕಾಶ ಸಿಗಲಿಲ್ಲ. ಈಗ ಈ ಸಿನಿಮಾದ ತುಣುಕುಗಳನ್ನು ನೋಡಿದ ಮೇಲೆ ನನ್ನ ಸ್ವಂತ ಖರ್ಚಿನಲ್ಲಿ ಖಂಡಿತ ಭೇಟಿ ಕೊಡುತ್ತೇನೆ. ನಿರ್ದೇಶಕರ ಸಾಮರ್ಥ್ಯ, ಅದರಲ್ಲೂ ಛಾಯಾಗ್ರಾಹಕರ ಕೈಚಳಕ ಅದ್ಬುತವಾಗಿದೆ. ಪ್ರಕೃತಿ ಅಂದರೆ ತಾಯಿ. ನಮ್ಮ ತಾಯಿಯನ್ನು ಉಳಿಸುವುದು ಎಲ್ಲರ ಹೊಣೆಯಾಗಿದೆ. ಇಲ್ಲದಿದ್ದರೆ ಮುಂದಿನ ಜನಾಂಗದವರು ಶಾಪ ಹಾಕುತ್ತಾರೆ. ಪರಿಸರವನ್ನು ನಾಶ ಮಾಡಬೇಡಿ. ಅದನ್ನು ಕಾಪಾಡಬೇಕೆಂದು ಕರೆ ನೀಡಿದರು.
ಸುಪ್ರೀತ್ ಹೆಗಡೆ ಸೋಮನಮನೆ ಅವರು ಅಖ್ಯಾನ ಪ್ರೊಡಕ್ಷನ್ ಅಡಿಯಲ್ಲಿ ‘ಕಾನ್ಧಾರಿ’ ನಿರ್ಮಾಣ ಮಾಡಿದ್ದಾರೆ. ಪರಿಕಲ್ಪನೆ ಮತ್ತು ನಿರ್ದೇಶನ ವಿನಾಯಕ ಹೆಗಡೆ ಬೊಮ್ಮನಳ್ಳಿ ಅವರದಾಗಿದೆ.
ಸಂಗೀತ ಹರ್ಷವರ್ಧನ್ ರಾಜ್, ಛಾಯಾಗ್ರಹಣ ಸತೀಶ್, ಸಂಕಲನ ಕೆ.ಎಂ.ಪ್ರಕಾಶ್, ಸಾಹಿತ್ಯ ಕವಿರಾಜ್, ಸಂತೋಷ್ ಅವರದಾಗಿದೆ. ಹಿಲ್ಲಿವುಡ್ ಪಿಕ್ಚರ್ಸ್ ಮುಖಾಂತರ ಚಿತ್ರ ಸೆ. 18ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
—





Be the first to comment