‘ಶಾಂತಿ-ಕ್ರಾಂತಿ’ ಸಿನಿಮಾದ ನಟ, ನಿರ್ದೇಶಕ ರವಿಚಂದ್ರನ್ ಅವರು ‘ಶಾಂತಿ-ಕ್ರಾಂತಿ’ ಸಿನಿಮಾದ ಮರು ಬಿಡುಗಡೆಗೆ ಇರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.
ಫಾದರ್ಸ್ ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, ‘ಸಿನಿಮಾ ಬಿಡುಗಡೆ ಮಾಡುವುದು ನನ್ನ ತಮ್ಮನ ಕೈಯಲ್ಲಿದೆ. ಆ ಸಿನಿಮಾಕ್ಕೆ ಆತನೇ ಪ್ರೊಪರೇಟರ್. ಸಿನಿಮಾದ ಮರು ಬಿಡುಗಡೆ ಮಾಡಲು ಇರುವ ಸಮಸ್ಯೆ ಎಂದರೆ ಆ ಸಿನಿಮಾದ ನೆಗೆಟಿವ್ಗಳು ಈಗ ಇಲ್ಲ. ಪ್ರಸಾದ್ ಲ್ಯಾಬ್ ಅಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾದ ನೆಗೆಟಿವ್ಗಳು ಇದ್ದವು. ಆದರೆ 25 ವರ್ಷಕ್ಕೂ ಹೆಚ್ಚು ಅವಧಿ ಆಗಿದ್ದರಿಂದ ಅದೆಲ್ಲ ಕರಗಿ ಹಾಳಾಗಿವೆ’ ಎಂದಿದ್ದಾರೆ.
‘ಶಾಂತಿ-ಕ್ರಾಂತಿ’ ಸಿನಿಮಾದ ನೆಗೆಟಿವ್ಗಳು ಇವೆ ಎಂದು ಹುಡಕಬೇಕು. ಅವನ್ನು ತಂತ್ರಜ್ಞಾನ ಬಳಸಿ ರಿಟ್ರೀವ್ ಮಾಡಬೇಕು ಅದಕ್ಕೆಲ್ಲ ಬಹಳ ಟೈಂ ಹಿಡಿಯುತ್ತದೆ. ಅಲ್ಲದೆ ಮತ್ತೆ 2 ರಿಂದ 3 ಕೋಟಿ ರೂಪಾಯಿ ಹಣವನ್ನೂ ನಾವು ಹೂಡಿಕೆ ಮಾಡಬೇಕಾಗುತ್ತದೆ. ಸಿನಿಮಾದ ಸಂಗೀತವನ್ನು ಮತ್ತೆ ಮಾಡಿಸಬೇಕು. ಆಗಿನ ಕಾಲಕ್ಕೆ ಬಹು ದೊಡ್ಡ ಆರ್ಕೆಸ್ಟ್ರಾ ನಾವು ಅರೇಂಜ್ ಮಾಡಿಸಿದ್ದೆವು’ ಎಂದು ಹೇಳಿದ್ದಾರೆ.
‘ಶಾಂತಿ-ಕ್ರಾಂತಿ’ ಸಿನಿಮಾ ರೀ-ರಿಲೀಸ್ ಮಾಡಿ ಎಂದು ಸಿನಿಮಾ ಪ್ರೇಮಿಗಳು ಬೇಡಿಕೆ ಇಡುತ್ತಿದ್ದಾರೆ. ಮೊದಲು ಬಿಡುಗಡೆ ಆಗಿ ಸೋತಿದ್ದ ‘ಶಾಂತಿ-ಕ್ರಾಂತಿ’ ಸಿನಿಮಾವನ್ನು ಈಗ ಗೆಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ.
—–





Be the first to comment