ಸೀರಿಯಲ್‌ನಲ್ಲಿ AI ಪ್ರಯೋಗ

ಜೀ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಸೀರಿಯಲ್‌ನಲ್ಲಿ  ಕೃತಕ ಬುದ್ಧಿಮತ್ತೆ (AI)  ಬಳಕೆಯ  ಪ್ರಯೋಗಕ್ಕೆ ಮುಂದಾಗಿದೆ.

ಧಾರಾವಾಹಿಯ ಪಾತ್ರಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಶ್ನೆಗಳು, ಸಮಸ್ಯೆಗಳು ಮತ್ತು ವಿವಿಧ ನಿರ್ಧಾರಗಳಿಗೆ AI   ಮೂಲಕ ಮಾಹಿತಿ ಪಡೆದುಕೊಳ್ಳುವ ದೃಶ್ಯಗಳನ್ನು ಕಥಾಹಂದರದ ಭಾಗವಾಗಿ ಪರಿಚಯಿಸಲಾಗುತ್ತಿದೆ. ಈ ಮೂಲಕ ಮನರಂಜನೆಯ ಜೊತೆಗೆ AI ತಂತ್ರಜ್ಞಾನದ ಬಳಕೆಯ ಬಗ್ಗೆಯೂ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ.

ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ‘ಗಂಗಾ ಮಾಯಿ ಕೀ ಬೇಟಿಯಾ’ ಮತ್ತು ‘ತುಮ್ ಸೇ ತುಮ್ ತಕ್’ ಧಾರಾವಾಹಿಗಳಲ್ಲಿ ಈ ರೀತಿಯ AI ಬಳಕೆಯನ್ನು ಕಥೆಯೊಳಗೆ ಅಳವಡಿಸಲಾಗುತ್ತಿದೆ. ಪಾತ್ರಗಳು ತಮ್ಮ ಸಂದರ್ಭಕ್ಕೆ ಅನುಗುಣವಾಗಿ AI ಮೋಡ್‌ ಬಳಸುವ ಮೂಲಕ ಮಾಹಿತಿ ಹುಡುಕಿಕೊಳ್ಳುವ ರೀತಿಯನ್ನು ಪ್ರೇಕ್ಷಕರಿಗೆ ತೋರಿಸಲಾಗುತ್ತಿದೆ.

ಧಾರಾವಾಹಿಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗಗಳಲ್ಲೂ ದೊಡ್ಡ ಪ್ರಮಾಣದಲ್ಲಿ ವೀಕ್ಷಿಸಲ್ಪಡುತ್ತವೆ. ಹೀಗಾಗಿ ಪರದೆಯ ಮೇಲೆ ಪಾತ್ರಗಳು AI ಬಳಸುವುದನ್ನು ನೋಡಿ  ಸಾಮಾನ್ಯ ವೀಕ್ಷಕರಲ್ಲೂ ಇಂತಹ ತಂತ್ರಜ್ಞಾನ ತಮ್ಮ ಮೊಬೈಲ್‌ನಲ್ಲಿ  ಲಭ್ಯವಿದೆಯೇ ಎಂಬ ಕುತೂಹಲ ಮೂಡುವ ಸಾಧ್ಯತೆಯಿದೆ.

ಈ ಪ್ರಯೋಗ ಹಿಂದಿ ಧಾರಾವಾಹಿಗಳಲ್ಲಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇತರ ಭಾರತೀಯ ಭಾಷೆಗಳ ಮನರಂಜನಾ ಕಾರ್ಯಕ್ರಮಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಕನ್ನಡ ಧಾರಾವಾಹಿಗಳಲ್ಲೂ ಇದೇ ರೀತಿಯ ಪ್ರಯೋಗ ನಡೆದರೆ ರಾಜ್ಯದ ನಗರ ಮತ್ತು ಗ್ರಾಮೀಣ ವೀಕ್ಷಕರಿಗೆ AI ತಂತ್ರಜ್ಞಾನದ ಬಳಕೆಯನ್ನು ಇನ್ನಷ್ಟು ಸುಲಭವಾಗಿ ಪರಿಚಯಿಸಲು ಸಾಧ್ಯವಾಗಬಹುದು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!