ಓಂಪ್ರಕಾಶ್ ರಾವ್ ವಿರುದ್ಧ ವಂಚನೆ ದೂರು

ಖ್ಯಾತ ನಿರ್ದೇಶಕ  ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ.  ಹಣ ಪಡೆದು ವಾಪಸ್ ನೀಡದ  ಆರೋಪ ಕೇಳಿ ಬಂದಿದೆ.

ಓಂಪ್ರಕಾಶ್ ರಾವ್ ಮತ್ತು ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧ ವಾಸುದೇವ ರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬವರು ದೂರು ನೀಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಹಣ ಪಡೆದು ಬಳಿಕ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ. ಹಣ ವಾಪಸ್ ಕೇಳಲು ಮನೆಗೆ ತೆರಳಿದ್ದ ವೇಳೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘2023ರಲ್ಲಿ ಓಂಪ್ರಕಾಶ್ ರಾವ್ ಅವರ ಪರಿಚಯವಾಗಿದ್ದು,   ಹೀರೋ ಆಗಬೇಕು ಎಂಬ ಆಸೆಯಿಂದ ರೂ. 10 ಲಕ್ಷ ಹಣವನ್ನು ಸಹಾಯವಾಗಿ ನೀಡಿದೆ. 2023ರಲ್ಲಿ ನೀಡಿದ್ದ ರೂ. 10 ಲಕ್ಷ ಇದೀಗ ಬಡ್ಡಿ ಸೇರಿ ರೂ.  20 ಲಕ್ಷವಾಗಿದೆ.  ಫೈನಾನ್ಸ್ ಉದ್ಯಮಿ ವಾಸುದೇವ್ ಅವರಿಂದಲೂ ಸುಮಾರು ರೂ. 3.30 ಕೋಟಿ ಹಣ ಪಡೆಯಲಾಗಿದೆ. ‘ಫೀನಿಕ್ಸ್’ ಸಿನಿಮಾಕ್ಕಾಗಿ ಹಣ ಪಡೆದಿದ್ದು ಅದಕ್ಕೆ ಸಂಬಂಧಿಸಿದಂತೆ ಅಗ್ರಿಮೆಂಟ್ ಹಾಗೂ ಚೆಕ್ ನೀಡಲಾಗಿದೆ. ಹಲವು ಬಾರಿ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದರೂ ಕಳೆದ ಮೂರು ವರ್ಷಗಳಿಂದ ಯಾವುದೇ ಹಣ ನೀಡಿಲ್ಲ’ ಎಂದು ಭಾಸ್ಕರ್ ಶೆಟ್ಟಿ ಆರೋಪಿಸಿದ್ದಾರೆ.

ಕೆಲ ಮಹಿಳೆಯರಿಂದ  ಸುಮಾರು  25 ಲಕ್ಷ ರೂ.  ಹಣ ಪಡೆದಿದ್ದಾರೆ. ಆ ಮಹಿಳೆಯರು ತಮ್ಮ ಆಸ್ತಿಯನ್ನು ಮಾರಿ ಹಣ ನೀಡಿದ್ದಾರೆ. ಹಣ ವಾಪಸ್ ನೀಡದಿದ್ದರೆ ಚೀಟಿಂಗ್ ಅಥವಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಫಿಲ್ಮ್ ಚೇಂಬರ್‌ನಲ್ಲಿ ದೂರು ನೀಡಲಾಗಿದ್ದು, ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಮೊರೆ ಹೋಗುವುದಾಗಿ ದೂರುದಾರರು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!