ಮಿಸ್ ಸೌತ್ ಇಂಡಿಯಾ

ಸಿರಿ ಹೆಚ್.ಎಸ್ ‘ಮಿಸ್ ಸೌತ್ ಇಂಡಿಯಾ 2026’ ವಿಜೇತೆ

ಕರ್ನಾಟಕದ 18 ವರ್ಷದ ಸಿರಿ ಹೆಚ್.ಎಸ್. ಅವರು ಪ್ರತಿಷ್ಠಿತ ಮಿಸ್ ಸೌತ್ ಇಂಡಿಯಾ 2026 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪೆಗಾಸಸ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಆಯೋಜಿಸಿದ್ದ 24ನೇ ಆವೃತ್ತಿಯ ಸ್ಪರ್ಧೆ ಆಗಸ್ಟ್ 9ರಂದು ಕೊಚ್ಚಿಯ ಲೆಮೆರಿಡಿಯನ್‌ನಲ್ಲಿ ನಡೆಯಿತು.

ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪ್ರತಿಭಾವಂತ ಸ್ಪರ್ಧಿಗಳನ್ನು ಹಿಂದಿಕ್ಕಿ ಸಿರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಮಿಸ್ ಪಾಪ್ಯುಲಾರಿಟಿ ಕ್ವೀನ್ ಉಪಪ್ರಶಸ್ತಿಯನ್ನೂ ಪಡೆದಿದ್ದಾರೆ. ಈ ಗೆಲುವಿನ ಮೂಲಕ 12 ವರ್ಷಗಳ ಬಳಿಕ ಮಿಸ್ ಸೌತ್ ಇಂಡಿಯಾ ಕಿರೀಟವನ್ನು ಕರ್ನಾಟಕಕ್ಕೆ ಮರಳಿ ತಂದ ಹೆಮ್ಮೆ ಸಿರಿಯವರದಾಗಿದೆ.

ಅವರ ಸಾಧನೆಗೆ ಕರ್ನಾಟಕದಾದ್ಯಂತ ಅಭಿನಂದನೆಗಳು ವ್ಯಕ್ತವಾಗುತ್ತಿದ್ದು, ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ. ಸಿರಿಯವರ ಆತ್ಮವಿಶ್ವಾಸ, ಪ್ರತಿಭೆ ಮತ್ತು ಪರಿಶ್ರಮಕ್ಕೆ ದೊರೆತ ಈ ಗೌರವ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಿರಿ ಹೆಚ್.ಎಸ್. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು!

Be the first to comment

Leave a Reply

Your email address will not be published. Required fields are marked *

Translate »
error: Content is protected !!