ಬಿಗ್‌ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಎಪಿಸೋಡ್ ನ್ನು ಲೈವ್‌ನಲ್ಲಿ ವೀಕ್ಷಿಸುವ ಅಪರೂಪದ ಅವಕಾಶವನ್ನು ಅಭಿಮಾನಿಗಳಿಗೆ ಕಲರ್ಸ್ ಕನ್ನಡ ನೀಡಿದೆ.
ಬಿಗ್‌ಬಾಸ್ ಅಭಿಮಾನಿಗಳಿಗಾಗಿ ವಿಶೇಷ ‘ಬಿಗ್‌ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಝೋನ್’ ನ್ನು ಲಾಲ್‌ಬಾಗ್ ಫ್ಲವರ್ ಶೋದಲ್ಲಿ ತೆರೆಯಲಾಗಿದೆ. ಇಲ್ಲಿ ಬಿಗ್‌ಬಾಸ್‌ನ ಐಕಾನಿಕ್ ಚೇರ್, ಸೆಲ್ಫಿ ಸ್ಪಾಟ್ ಸೇರಿದಂತೆ ಹಲವು ವಿಶೇಷ ಆಕರ್ಷಣೆಗಳನ್ನು ಸಿದ್ಧಪಡಿಸಲಾಗಿದೆ.
ಲೈವ್ ವೀಕೆಂಡ್ ಎಪಿಸೋಡ್ ನೋಡಲು ಬಯಸುವವರು ಈ ಎಕ್ಸ್‌ಪೀರಿಯನ್ಸ್ ಝೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಬೇಕು. ಪೋಸ್ಟ್‌ನಲ್ಲಿ ಕಲರ್ಸ್ ಕನ್ನಡವನ್ನು ಟ್ಯಾಗ್ ಮಾಡುವುದರ ಜೊತೆಗೆ #BBKAGNIPARIKSHE ಹ್ಯಾಶ್‌ಟ್ಯಾಗ್ ಬಳಸಬೇಕು. ಪೋಸ್ಟ್ ಸಾರ್ವಜನಿಕವಾಗಿ ಕಾಣುವಂತಿರಬೇಕು.
ಈ ನಿಯಮಗಳನ್ನು ಪಾಲಿಸಿ ಆಯ್ಕೆಯಾದ ಕೆಲ ಅದೃಷ್ಟಶಾಲಿಗಳಿಗೆ ಬಿಗ್‌ಬಾಸ್ ಕನ್ನಡ ವೀಕೆಂಡ್ ಎಪಿಸೋಡ್ ನ್ನು ನೇರವಾಗಿ ವೀಕ್ಷಿಸುವ ಅವಕಾಶ ನೀಡಲಾಗುತ್ತದೆ. ಜೊತೆಗೆ ಬಿಗ್‌ಬಾಸ್ ವಿಶೇಷ ಉಡುಗೊರೆಗಳನ್ನು ಗೆಲ್ಲುವ ಅವಕಾಶವೂ ಇರಲಿದೆ. ಲಾಲ್‌ಬಾಗ್ ಫ್ಲವರ್ ಶೋ ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಬಿಗ್‌ಬಾಸ್ ಎಕ್ಸ್‌ಪೀರಿಯನ್ಸ್ ಝೋನ್ ಸಾರ್ವಜನಿಕರಿಗೆ ಲಭ್ಯವಿರಲಿದೆ.
ಶೀಘ್ರದಲ್ಲೇ ಸೀಸನ್ 13ರ ಅಧಿಕೃತ ದಿನಾಂಕ ಪ್ರಕಟವಾಗಲಿದ್ದು, ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಈ ಬಾರಿ ಸಾಮಾನ್ಯ ಸ್ಪರ್ಧಿಗಳಿಗೂ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಿದ್ದು, ಈಗಾಗಲೇ ಸ್ಪರ್ಧಿಗಳ ಅಂತಿಮ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ.
—–




Be the first to comment