ನಟಿ ಊರ್ವಶಿ ‘ರಾಮಾ ಭಾಮಾ ಶಮಾ’ ನಂತರ ಅನುಪ್ ಆಂಟನಿ ನಿರ್ದೇಶನದ ಡಾರ್ಕ್ ಕಾಮಿಡಿ ಚಿತ್ರ ‘ಬುಲ್ಲಿ’ ಯಲ್ಲಿ ನಟಿಸುತ್ತಿದ್ದಾರೆ.
ಭುವನ್ ಪೊನ್ನಣ್ಣ ಜೊತೆ ತೇಜ ಲಕ್ಷ್ಮಿ ಊರ್ವಶಿ ನಟಿಸುತ್ತಿದ್ದಾರೆ. ಊರ್ವಶಿ ಮಗಳು ತೇಜ ಲಕ್ಷ್ಮಿ ‘ಬುಲ್ಲಿ’ ಮೂಲಕ ಕನ್ನಡ ಸಿನಿಮಾ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ.

‘‘ನಾನು ಮತ್ತು ನನ್ನ ಮಗಳು ಜೊತೆಯಾಗಿ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಇದೇ ಮೊದಲ ಬಾರಿ ಕನ್ನಡ ಸಿನಿಮಾ ಬುಲ್ಲಿಯಲ್ಲಿ ಜೊತೆಯಾಗಿ ನಟಿಸುತ್ತಿದ್ದೇವೆ. ಮಗಳು ತೇಜಾ ಬೆಂಗಳೂರಿನಲ್ಲೇ ಓದಿ ಇದೀಗ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾಳೆ. ಸಿನಿಮಾಗಳಲ್ಲೂ ನಟಿಸುತ್ತಿದ್ದಾಳೆ” ಎಂದು ಊರ್ವಶಿ ಹೇಳಿದ್ದಾರೆ.

”ಕಳೆದ ದಶಕದಲ್ಲಿ ಹಲವಾರು ಕನ್ನಡ ಸ್ಕ್ರಿಪ್ಟ್‌ಗಳನ್ನು ತಿರಸ್ಕರಿಸಿದೆ. ನನಗೆ ಕಥೆ ಇಷ್ಟವಾಗಲಿಲ್ಲ. ನಾನು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಬ್ಯುಸಿಯಾದೆ. ಭುವನ್ ಮತ್ತು ಹರ್ಷಿಕಾ ಚೆನ್ನೈಗೆ ಬಂದು ಬುಲ್ಲಿ ಕಥೆ ಬಗ್ಗೆ ಹೇಳಿದಾಗ ನನಗೆ ಕಥೆ ಇಷ್ಟವಾಯಿತು. ನನ್ನ ಪಾತ್ರದ ಶೂಟಿಂಗ್ ಪೂರ್ಣಗೊಳಿಸಿದ ನಂತರ ನಾನು ಅದನ್ನು ಒಪ್ಪಿಕೊಳ್ಳದಿದ್ದರೆ ನಾನು ಒಳ್ಳೆಯ ಚಿತ್ರವನ್ನು ಕಳೆದುಕೊಳ್ಳುತ್ತಿದ್ದೆ ಎಂದು ನನಗೆ ಅನಿಸಿತು” ಎಂದು ಹೇಳಿದ್ದಾರೆ
ಚಿತ್ರದಲ್ಲಿ ಅಚ್ಯುತ್ ಕುಮಾರ್, ಓಂ ಪ್ರಕಾಶ್ ರಾವ್, ಪ್ರಕಾಶ್ ತುಮಿನಾಡು, ಹುಲಿ ಕಾರ್ತಿಕ್ ಮತ್ತು ಆರ್ಯ ಸಂತೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.






Be the first to comment