ಸುಮಾರು 8 ವರ್ಷಗಳ ನಂತರ ಗಡಿಯಾರ ಚಿತ್ರದ ನಿರ್ದೇಶಕ ಪ್ರಬಿಕ್ ಮೊಗವೀರ್ ಅವರು ಪಿಸ್ತೂಲ್ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಒಂದು ಗನ್ ಆರು ಬುಲೆಟ್ ಎನ್ನುವ ಅಡಿಬರಹ ಈ ಚಿತ್ರಕ್ಕೆ ಇದೆ. ಪಕ್ಕ ಮಾಸ್ ಜೊತೆಗೆ ಥ್ರಿಲಿಂಗ್ ಕಂಟೆಂಟ್ ಇದು ಒಳಗೊಂಡಿದೆ. ನಿರ್ದೇಶಕರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದ ಕಥಾ ವಸ್ತು ವಿಭಿನ್ನವಾಗಿರಲಿದೆ ಎಂದು ಪ್ರಬಿಕ್ ಮೊಗವೀರ್ ಅವರು ಹೇಳಿದ್ದಾರೆ.
ಪ್ರಬಿಕ್ ಮೊಗವೀರ್ ಅವರು ಹಿಂದೆ ನಿರ್ದೇಶಿಸಿದ್ದ ಗಡಿಯಾರ ಚಿತ್ರ ಕನ್ನಡ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಪ್ರಬಿಕ್ ಅವರು ಬಳಿಕ ನಟನೆಯತ್ತ ಹೆಚ್ಚು ಗಮನಹರಿಸಿದ್ದು ಶಾಂತಿಯನ್ನು ಕಳೆದುಕೊಳ್ಳಬೇಡಿ, ತನಿಖೆ, ಅಸುರನ ಕೈಯಲ್ಲಿ ಪಾರಿಜಾತ, ರಾವೆನ್, ನಾಯಿ ಇದೆ ಎಚ್ಚರಿಕೆ ಮೊದಲಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪಿಸ್ತೂಲ್ ಚಿತ್ರದ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಪಿಸ್ತೂಲ್ ಚಿತ್ರ ತಂಡ ಈಗಾಗಲೇ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದು ಅನುಭವಿ ಕಲಾವಿದರು ತಂಡವನ್ನು ಸೇರಲಿದ್ದಾರೆ.





Be the first to comment