ಶ್ರೀಕೃಷ್ಣ

Movie Review: ನಿಗೂಢ ಸಾವಿನ ಕಥೆ ಶ್ರೀಕೃಷ್ಣ

ಚಿತ್ರ: ಶ್ರೀಕೃಷ್ಣ
ನಿರ್ದೇಶನ: ಶಂಕರ್ ರಾಜ ವರ್ಮ
ನಿರ್ಮಾಣ: ಶಂಕರ ರಾಜ, ಅಜಯ್ ಕುಮಾರ್
ತಾರಾ ಬಳಗ: ಶಂಕರ್ ರಾಜ ವರ್ಮಾ, ಚೈತ್ರ ತೋಟದ, ಪ್ರದೀಪ್ ಪೂಜಾರಿ, ಭುವನ್ ಗೌಡ, ಸ್ನೇಹಾ, ಇತರರು
ರೇಟಿಂಗ್ : 3.5/5

ಪ್ರೇಯಸಿಯ ನಿಗೂಢ ಸಾವಿನ ಸುತ್ತ ನಡೆಯುವ ಕುತೂಹಲಕಾರಿ ಸಿನಿಮಾ ಶ್ರೀಕೃಷ್ಣ.

ಸಣ್ಣ ಹೋಟೆಲ್ ನಡೆಸಿಕೊಂಡು ಹೋಗುವ ಅನಾಥ ಹುಡುಗ ಶಂಕರ ಚಿತ್ರದ ನಾಯಕ. ಆಶ್ರಮದಿಂದ ತಪ್ಪಿಸಿಕೊಂಡು ಬಂದ ಅನಾಥ ಹುಡುಗಿ ಇಲ್ಲಿ ಚಿತ್ರದ ನಾಯಕಿ. ಈಕೆ ಹಿರಿಯರ ಅನುಮತಿಯೊಂದಿಗೆ ಶಂಕರನ ಜೊತೆ ವಾಸಿಸುತ್ತಾಳೆ. ಮುಂದೆ ಇವರ ಸ್ನೇಹ ಪ್ರೀತಿಯ ಕಡೆಗೆ ಸಾಗುತ್ತದೆ. ಹೀಗಿರುವಾಗ ಒಂದು ದಿನ ನಾಯಕನ ಪ್ರೇಯಸಿ ನಿಗೂಢವಾಗಿ ಶವವಾಗಿ ಪತ್ತೆಯಾಗುತ್ತಾಳೆ. ಈ ಕೊಲೆಯ ರಹಸ್ಯವನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.

ಚಿತ್ರದಲ್ಲಿ ಅನಾಥರ ಸ್ಥಿತಿಯನ್ನು ಬಳಸಿಕೊಂಡು ದುಷ್ಟ ವ್ಯಕ್ತಿಗಳ ಪಡೆಗಳು ಯಾವ ರೀತಿ ಕೆಟ್ಟ ಕೆಲಸವನ್ನು ಮಾಡುತ್ತವೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಕೆಟ್ಟ ವ್ಯಕ್ತಿಗಳನ್ನು ಮಟ್ಟ ಹಾಕಲು ನಾಯಕನ ಶ್ರೀ ಕೃಷ್ಣನ ರೀತಿಯ ಚಾಣಾಕ್ಷತನದ ಎಳೆಯನ್ನು ಚಿತ್ರದಲ್ಲಿ ಪೋಣಿಸಲಾಗಿದೆ.

ಚಿತ್ರದ ಹಾಡುಗಳು ಸೊಗಸಾಗಿ ಮೂಡಿ ಬಂದಿದೆ. ನಿರ್ದೇಶಕ ಶಂಕರ್ ರಾಜ್ ವರ್ಮ ನಾಯಕನಾಗಿ ನಟಿಸಿ ತಮ್ಮ ಪಾತ್ರಕ್ಕೆ ಜೀವ ತುಂಬುವ ಯತ್ನವನ್ನು ಮಾಡಿದ್ದಾರೆ. ನಾಯಕಿ ಚೈತ್ರ ತೋಟದ ತಮ್ಮ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಚಿತ್ರದ ಕಥೆಗೆ ಪೂರಕವಾಗಿ ಉಳಿದ ಕಲಾವಿದರು ನಟಿಸಿದ್ದಾರೆ.

ಸಮಾಜದ ಸ್ಥಿತಿಗತಿಗಳ ಬಗ್ಗೆ ಹೇಳುವ ಈ ಸಿನಿಮಾವನ್ನು ಒಂದು ಬಾರಿ ನೋಡಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!