ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಚಿತ್ರದ ಟ್ರೈಲರ್ ನೋಡಿದವರಿಗೆ ಇದು ಪಕ್ಕ ಮತ್ತೊಂದು ಪ್ರೇಮ ಕಥೆ ಎಂದು ಅನಿಸುತ್ತದೆ. ಸರಳ ನಿರೂಪಣೆಯ ಮೂಲಕ ಚಿತ್ರದ ಕಥೆ ಪ್ರೇಕ್ಷಕರಿಗೆ ಇಷ್ಟ ಆಗುವಂತೆ ನಿರ್ದೇಶಕರು ಕಥೆ ಹೇಳಿರುವುದು ಟ್ರೈಲರ್ ನಲ್ಲಿ ಗೊತ್ತಾಗುತ್ತದೆ.
‘ಒಂದು ಸರಳ ಪ್ರೇಮ ಕತೆಯ ನಂತರ ಬರುತ್ತಿರುವ ಅಚ್ಚುಕಟ್ಟಾದ ಪ್ರೇಮ ಕತೆಯ ಸಿನಿಮಾ ಇದು. ಇದು ನನ್ನ ಜೀವನದ ವಿಶೇಷ ಚಿತ್ರ. ನಾನು ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆಂದು ಹೇಳುತ್ತಾರೆ. ಆದರೆ ಈ ಚಿತ್ರಕ್ಕೆ ಟ್ರೇಲರ್ ಕಟ್ ಮಾಡಲು ಆಗುತ್ತಿಲ್ಲ. ಏನೇ ಟ್ರೇಲರ್ ಕಟ್ ಮಾಡಿದರೂ ಚಿತ್ರದ ಕತೆ ಹೇಳಿದಂತೆ ಆಗುತ್ತದೆ. ಹೀಗಾಗಿ ಚಿತ್ರದ ಅರ್ಧ ಬಿಟ್ಟು ಉಳಿದರ್ಧ ಭಾಗದಲ್ಲಿ ಟ್ರೇಲರ್ ಕಟ್ ಮಾಡುವುದೇ ಸವಾಲು ಆಗಿದೆ. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ನೀವು ಥಿಯೇಟರ್ನಲ್ಲಿಯೇ ನೋಡಬೇಕು’ ಎಂದು ಸಿಂಪಲ್ ಸುನಿ ತಿಳಿಸಿದ್ದಾರೆ.
ಶೀಲಮ್, ಮೋಕ್ಷ ಕುಶಾಲ್, ಸಾತ್ವಿಕಾ ಚಿತ್ರದ ತಾರಾ ಜೋಡಿ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್ ಚಿತ್ರದ ನಿರ್ಮಾಪಕರು. ಸಂತೋಷ್ ರೈ ಪಾತಾಜೆ ಕ್ಯಾಮೆರಾ, ಜೂಡಾ ಸ್ಯಾಂಡಿ ಸಂಗೀತ ಇದೆ.





Be the first to comment