ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೊಮ್ಮಗ ಯಾತ್ರಾ ಶೀಘ್ರದಲ್ಲೇ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ.
ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್ ಅವರ ಹಿರಿಯ ಪುತ್ರ ಯಾತ್ರಾ ಅವರನ್ನು ನಾಯಕನಾಗಿ ಪರಿಚಯಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲಿ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗಿದೆ. ಯಾತ್ರಾ ಅಭಿನಯದ ಮೊದಲ ಚಿತ್ರಕ್ಕೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.
ಪುತ್ರನ ಸಿನಿಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಧನುಷ್ ಆಸಕ್ತಿ ವಹಿಸಿದ್ದು, ಉತ್ತಮ ಕಥೆ ಸಿದ್ಧಪಡಿಸುವಂತೆ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಧನುಷ್–ಐಶ್ವರ್ಯ ವಿಚ್ಛೇದನದ ಬಳಿಕ ಯಾತ್ರಾ ಹೆಚ್ಚಾಗಿ ತಾತ ರಜನಿಕಾಂತ್ ಅವರ ಜೊತೆ ಕಾಣಿಸಿಕೊಂಡಿದ್ದು, ಮುದ್ದಿನ ಮೊಮ್ಮಗನಾಗಿದ್ದಾರೆ.
ಈ ಹಿಂದೆ ಯಾತ್ರಾ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ್ದ ಧನುಷ್, “ಅವನು ಇನ್ನೂ ಯುವಕ. ಅವನ ಭವಿಷ್ಯದ ಬಗ್ಗೆ ಈಗಲೇ ಹೇಳುವುದು ಬೇಗವಾಗುತ್ತದೆ” ಎಂದಿದ್ದರು. ಆದರೆ ಇದೀಗ ಯಾತ್ರಾ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಸುಳಿವು ಸಿಕ್ಕಿದೆ.
—-





Be the first to comment