ಚರ್ಚೆಗೆ ಕಾರಣವಾದ ಜಾಹ್ನವಿ ಉಡುಪು

ರಾಮ್ ಚರಣ್ ನಟಿಸಿರುವ ‘ಪೆದ್ದಿ’ಯಲ್ಲಿ ಜಾಹ್ನವಿ ಕಪೂರ್ ಅವರ ಉಡುಪು  ತೀವ್ರ ಚರ್ಚೆಗೆ ಕಾರಣವಾಗಿದೆ.

ಜಾಹ್ನವಿ ಕಪೂರ್ ನ್ನು ಹಸಿಬಿಸಿ ದೃಶ್ಯಗಳಲ್ಲಿ ಹೆಚ್ಚಾಗಿ ತೋರಿಸಲಾಗಿದೆ. ನಟಿಯ ದೇಹವನ್ನು ಹೆಚ್ಚು ಜೂಮ್ ಹಾಕಿ ತೋರಿಸುವುದನ್ನು ಹಲವರು ಪ್ರಶ್ನಿಸಿದ್ದಾರೆ.

ಒಂದು ದೃಶ್ಯದಲ್ಲಿ ನಾಯಕ ರಾಮ್ ಚರಣ್ ನಾಯಕಿ ಅಚಿಯಮ್ಮಗೆ ಆಸಕ್ತಿ ಇಲ್ಲದಿದ್ದರೂ ಅವರೊಂದಿಗೆ ಇರಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ನಂತರ ವಿದ್ಯುತ್ ಕಡಿತದ ಸಮಯದಲ್ಲಿ ಅವನು ಅವಳ ಒಪ್ಪಿಗೆಯಿಲ್ಲದೆ ಅವಳನ್ನು ಚುಂಬಿಸುತ್ತಾನೆ. ಈ ದೃಶ್ಯವು ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಆಶಿಕಾ ರಂಗನಾಥ್, ಜಾಹ್ನವಿ ಅವರ ಬೆಂಬಲಕ್ಕೆ ನಿಂತಿದ್ದು ನೀವು ಚಿತ್ರತಂಡವನ್ನು ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.

ಆಶಿಕಾ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಪೋಸ್ಟ್  ಹಂಚಿಕೊಂಡಿದ್ದಾರೆ, ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕಿಯನ್ನು ಗ್ಲಾಮರಸ್ ಆಗಿ ತೋರಿಸಲಾಗುತ್ತದೆ. ನಾಯಕನನ್ನು ನಾಯಕಿ ಹೇಗೆ ಆಕರ್ಷಿಸುತ್ತಾಳೆ ಎಂಬುದೇ ಆಗಿರುತ್ತದೆ. ಇದಕ್ಕೆ ನೀವು ನಟಿಯನ್ನು ದೂಷಿಸಬೇಡಿ. ಹಸಿಬಿಸಿ ದೃಶ್ಯಗಳಿರುವ ಚಿತ್ರಗಳನ್ನು ನಿರ್ಮಿಸುವ ವ್ಯವಸ್ಥೆ ಮತ್ತು ನಿರ್ಮಾಪಕರನ್ನು ದೂಷಿಸಿ. ನಟರು ದೊಡ್ಡ ಚಿತ್ರಗಳ ಭಾಗವಾಗುತ್ತಾರೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತಾರೆ ಎಂಬ ಭರವಸೆಯೊಂದಿಗೆ ಕೆಲಸ ಮಾಡುತ್ತಾರೆ. ಮಹಿಳಾ ಪಾತ್ರಗಳನ್ನು ಚೆನ್ನಾಗಿ ತೋರಿಸದಿದ್ದರೆ, ಜವಾಬ್ದಾರಿ ಬರವಣಿಗೆ ಮತ್ತು ಚಲನಚಿತ್ರ ನಿರ್ಮಾಣ ನಿರ್ಧಾರಗಳ ಮೇಲಿರುತ್ತದೆ’ ಎಂದು ಬರೆದಿದ್ದಾರೆ.

ರಾಮ್ ಚರಣ್, ಜಾಹ್ನವಿ ಕಪೂರ್, ಶಿವ ರಾಜ್‌ಕುಮಾರ್, ದಿವ್ಯೆಂದು ಮತ್ತು ಬೋಮನ್ ಇರಾನಿ ನಟಿಸಿರುವ ‘ಪೆದ್ದಿ’ ಚಿತ್ರ  ವಿಶ್ವಾದ್ಯಂತ 234 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!