ಕಲ್ಯಾಣಿ

ಗಿರಿರಾಜ ಅವರ ‘ಕಲ್ಯಾಣಿ’ ಚಿತ್ರ ವರ್ಷಾಂತ್ಯ ತೆರೆಗೆ

ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ ಎಂ ಗಿರಿರಾಜ ಅವರ ಕಲ್ಯಾಣಿ ಚಿತ್ರ ಈ ವರ್ಷಾಂತ್ಯ ತೆರೆಗೆ ಬರಲಿದೆ.

ಬಸವ ರೆಡ್ಡಿ ಅವರ ಕಥೆಗೆ ನಿರ್ದೇಶಕರು ಸಿನಿಮಾ ರೂಪಕೊಟ್ಟು ಅದನ್ನು ತೆರೆಗೆ ತರುತ್ತಿದ್ದಾರೆ. ತಿಂಗಳ ಹಿಂದೆ ಸದ್ದಿಲ್ಲದೆ ಆರಂಭವಾಗಿದ್ದ ಸಿನಿಮಾ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ. ಆಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿಯನ್ನು ನೀಡಿದೆ.

ಕಲ್ಯಾಣಿ

ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳು ಈ ಸಿನಿಮಾದಲ್ಲಿವೆ. ಉತ್ತರ ಭಾರತದ ಹುಡುಗಿ ಹಾಗೂ ದಕ್ಷಿಣ ಭಾರತದ ಹುಡುಗನ ಪಾತ್ರಗಳನ್ನು ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಚಿತ್ರದಲ್ಲಿ ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದ ಮೂರು ಹಾಡುಗಳಿಗೆ ಭರತ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಒಂದು ಹಾಡಿನಲ್ಲಿ ದ ರಾ ಬೇಂದ್ರೆ ಹಾಗೂ ಮತ್ತೊಂದು ಹಾಡಿನಲ್ಲಿ ವಿಜಯ್ ಈಶ್ವರ್ ಅವರ ಸಾಹಿತ್ಯ ಇದೆ.

ಕುಮಾರಸ್ವಾಮಿ ಅವರು ಆರ್ ಕೆ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಟ ಸಾಮ್ರಾಟ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಭಾರತದ ನಟಿ ಸಿಮ್ರಾನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಕಲ್ಯಾಣಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!