ತರಂಗಾಂತರಂಗ

‘ತರಂಗಾಂತರಂಗ’ ಚಿತ್ರದ ಹಾಡು ಬಿಡುಗಡೆ

ಶ್ರೀಶ ನಿರ್ಮಿಸಿ, ನಿರ್ದೇಶಿಸುತ್ತಿರುವ ತರಂಗಾಂತರಂಗ ಚಿತ್ರದ ಹಾಡುಗಳು ಬಿಡುಗಡೆಗೊಂಡಿವೆ.

ಚಿತ್ರತಂಡ ಆಯೋಜನೆ ಮಾಡಿದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಎರಡು ಹಾಡುಗಳ ಲಿರಿಕಲ್ ವಿಡಿಯೋ ಪ್ರದರ್ಶಿಸಲಾಯಿತು. ನಿರ್ದೇಶಕರು ಈ ಸಂದರ್ಭದಲ್ಲಿ ಹಾಡುಗಳು ಒಂದಕ್ಕಿಂತ ಒಂದು ಹೇಗೆ ಭಿನ್ನವಾಗಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಕನ್ನಡದ ಸಮಾ ಕುಡುವ ಹಾಡು ಗಮನ ಸೆಳೆಯಿತು.

ಸಂಗೀತ ನಿರ್ದೇಶಕ ಜೋಡಿ ಪ್ರದೀಪ್ ಮತ್ತು ಪ್ರವೀಣ್ ಸಹೋದರರು ಮಾತನಾಡಿ, ನಿರ್ದೇಶಕರು ಹೊಸತು ಟ್ರೈ ಮಾಡಿ ಎಂದಷ್ಟೇ ಹೇಳಿದರು. ಟ್ರೈ ಮಾಡಿ ಎನ್ನುವ ಪಲ್ಲವಿಯಲ್ಲೇ ಹಾಡನ್ನ ಗೀತ ಸಾಹಿತಿ ನಾಗಾರ್ಜುನ ಶರ್ಮ ಬರೆದಿದ್ದಾರೆ. ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ ಎಂದರು.

ನಿರ್ದೇಶಕರು ಚಿತ್ರದ ಬಗ್ಗೆ ವಿವರಣೆ ನೀಡಿ, ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಆಗಿದೆ. ಇಬ್ಬರು ನಾಯಕಿಯರು ಇದ್ದಾರೆ. ದಿನೇಶ್ ಮಂಗಳೂರು ಅವರ ಪಾತ್ರ ಕ್ಲೈಮ್ಯಾಕ್ಸ್ ನಲ್ಲಿ 15 ನಿಮಿಷಗಳ ಕಾಲ ಇರಲಿದೆ ಎಂದರು.

ತರಂಗಾಂತರಂಗ

ಚಿತ್ರದಲ್ಲಿ ನಾಯಕಿಯರಾಗಿ ಯಶಸ್ವಿನಿ ಸ್ವಾಮಿ, ಅಶ್ವಿನಿ ಅವರು ನಟಿಸಿದ್ದಾರೆ. ಅಕ್ಷಯ್ ಎಸ್ ರಿಷಬ್ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರತಂಡ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ.

ತರಂಗಾಂತರಂಗ

Be the first to comment

Leave a Reply

Your email address will not be published. Required fields are marked *

Translate »
error: Content is protected !!