ಬಾಲಿವುಡ್ ನಟ ರಣ್ವೀರ್ ಸಿಂಗ್ ‘ಡಾನ್ 3’ ಸಿನಿಮಾದಿಂದ ಹೊರಬಂದಿದ್ದಕ್ಕೆ ಫೆಡರೇಷನ್ ಆಫ್ ಇಂಡಿಯನ್ ಸಿನಿ ಎಂಪ್ಲಾಯಿಸ್ ರಣ್ವೀರ್ ವಿರುದ್ಧ ಅಸಹಕಾರ ಘೋಷಿಸಿದೆ.
ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡುವುದಿಲ್ಲ ಎಂದು ಫೆಡರೇಷನ್ ಹೇಳಿದೆ.ಈ ವಿಚಾರ ರಣ್ವೀರ್ ಸಿಂಗ್ ಅವರನ್ನು ದೊಡ್ಡ ವಿವಾದಕ್ಕೆ ಸಿಲುಕಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದರ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ.
ರಣ್ವೀರ್ ಸಿಂಗ್ ನಟಿಸಬೇಕಿದ್ದ ಸಿನಿಮಾ ನಿಂತು ಹೋಗಿರುವುದು ಇದೇ ಮೊದಲಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಘೋಷಣೆಯಾಗಿದ್ದ ‘ಬೈಜು ಬವರಾ’ ಸಿನಿಮಾ ಆರಂಭವಾಗುವ ಮುನ್ನ ನಿಂತು ಹೋಯಿತು. ತಮಿಳಿನ ನಿರ್ದೇಶಕ ಶಂಕರ್ ಜೊತೆ ‘ಅನ್ನಿಯನ್’ ರೀಮೇಕ್ ಯೋಜನೆ ಮಧ್ಯದಲ್ಲೇ ನಿಂತು ಬಿಟ್ಟಿತ್ತು.
ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ರ ಣ್ವೀರ್‌ಗಾಗಿ ‘ಶಕ್ತಿಮಾನ್’ ಸಿನಿಮಾ ರೂಪಿಸಲು ಯತ್ನಿಸಿದ್ದರು. ಆದರೆ ಚರ್ಚೆ ಬಳಿಕ ರಣ್ವೀರ್ ಆ ಸಿನಿಮಾಗೂ ನೋ ಹೇಳಿದ್ದರು.
ಕರಣ್ ಜೋಹರ್ ನಿರ್ಮಾಣದ ‘ತಕ್ತ್’ ಸಿನಿಮಾ ಸೆಟ್ಟೇರಲಿಲ್ಲ. ತೆಲುಗಿನ ನಿರ್ದೇಶಕ ಪ್ರಶಾಂತ್ ವರ್ಮಾ ಜೊತೆ ರಣ್ವೀರ್ ಸಿನಿಮಾ ಮಾಡಲು ಮುಂದಾಗಿದ್ದರು. ಬಳಿಕ ಆ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದರು. ಈಗ ಅದೇ ಕಥೆಯನ್ನು ‘ಜೈ ಹನುಮಾನ್’ ಹೆಸರಿನಲ್ಲಿ ರಿಷಬ್ ಶೆಟ್ಟಿಗಾಗಿ ಮಾಡಲಾಗುತ್ತಿದೆ ಎನ್ನಲಾಗಿದೆ.
—-





Be the first to comment