ಟ್ರೋಲರ್‌ಗೆ ಶಮಿತಾ ಶೆಟ್ಟಿ ಕ್ಲಾಸ್

ಬಾಲಿವುಡ್ ನಟಿ ಶಮಿತಾ ಶೆಟ್ಟಿ  47ನೇ ವಯಸ್ಸಿನಲ್ಲೂ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಟೀಕೆ ಮಾಡಿದ ನೆಟ್ಟಿಗನಿಗೆ  ತಿರುಗೇಟು ನೀಡಿದ್ದಾರೆ.

‘ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದರೆ ನಿಮ್ಮ ಮಕ್ಕಳು ಈಗ ದೊಡ್ಡವರಾಗುತ್ತಿದ್ದರು’ ಎಂಬ ಕಾಮೆಂಟ್‌ಗೆ ಶಮಿತಾ ಶೆಟ್ಟಿ  ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಟ್ರೋಲ್ ಕಾಮೆಂಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡ ಶಮಿತಾ, ‘ಮದುವೆಯಾಗಿ ನೀವೇನು ಸಾಧಿಸಿದ್ದೀರಾ? ಅದಕ್ಕೀಗೇನು? ಒಂಟಿ ಮಹಿಳೆಯರನ್ನು ವಯಸ್ಸಿನ ಹೆಸರಿನಲ್ಲಿ ಅವಮಾನಿಸಲು ಮತ್ತು ನಿಮ್ಮ ಪಿತೃಪ್ರಧಾನ ಆಲೋಚನೆಗಳನ್ನು ನಮ್ಮ ಮೇಲೆ ಹೇರಲು ಏಕೆ ಪ್ರಯತ್ನಿಸುತ್ತೀರಿ? ದಯವಿಟ್ಟು ನನಗೆ ಒಂದು ಉಪಕಾರ ಮಾಡಿ. ನನ್ನನ್ನು ಅನ್‌ಫಾಲೋ ಮಾಡಿ’ ಎಂದು ಶಮಿತಾ ಆಕ್ರೋಶ ಹೊರ ಹಾಕಿದ್ದಾರೆ.

‘ವಯಸ್ಸಾದಂತೆ ನಾನು ವಿಭಿನ್ನವಾಗಿ ಕಾಣುತ್ತಿದ್ದೇನೆ. ಸಮಯದೊಂದಿಗೆ ಎಲ್ಲವೂ ಬದಲಾಗುತ್ತದೆ. ಅದು ಪ್ರಕೃತಿಯ ನಿಯಮ. ಆದರೆ ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ಸಂತೋಷವಾಗಿದ್ದೇನೆ ಮತ್ತು ಕೃತಜ್ಞತೆಯಿಂದ ಬದುಕುತ್ತಿದ್ದೇನೆ. ನನಗೆ ಅಷ್ಟೇ ಸಾಕು’ ಎಂದು ಉತ್ತರಿಸಿದ್ದಾರೆ.

2000ರಲ್ಲಿ ‘ಮೊಹಬ್ಬತೇನ್’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶಮಿತಾ, ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ‘ಬಿಗ್ ಬಾಸ್’, ‘ಖತ್ರೋನ್ ಕೆ ಕಿಲಾಡಿ’ ಹಾಗೂ ‘ಝಲಕ್ ದಿಖ್ಲಾ ಜಾ’ ರಿಯಾಲಿಟಿ ಶೋಗಳ ಮೂಲಕ ಮತ್ತೆ ಜನಪ್ರಿಯತೆ ಗಳಿಸಿದ್ದರು.

——

 

 

 

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!