‘ರಾಮಾಚಾರಿ’ ಮನದರಸಿ ಮೌನ ಗುಡ್ಡೆಮನೆ ಮೈಕ್ರೋ ಸರಣಿ ‘ಲವ್ ಪಂಚ್’ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ಸೀರೆಯುಟ್ಟು ಅಪ್ಪಟ ಮನೆ ಮಗಳಂತೆ ಕಾಣಿಸಿಕೊಂಡಿದ್ದ ಮೌನ ಗುಡ್ಡೆಮನೆ, ‘ಲವ್ ಪಂಚ್’ ನಲ್ಲಿ ಬಿಕಿನಿ ಧರಿಸಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ದಿಲೀಪ್ ರಾಜ್ ನಿರ್ದೇಶನದ ಈ ಸರಣಿಯಲ್ಲಿ ಮೌನ ಮತ್ತು ಶರತ್, ನಂದಿನಿ ಹಾಗೂ ಪ್ರೀತಮ್ ಎಂಬ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ‘ಲವ್ ಪಂಚ್’ ಬುಲೆಟ್ ಮೈಕ್ರೋಡ್ರಾಮಾ ಅಪ್ಲಿಕೇಶನ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಇದು ಕಾಲೇಜು ಜೀವನದ ಕಥೆಯಾಗಿದೆ. ವಿಭಿನ್ನ ಮನಸ್ಥಿತಿ ಹೊಂದಿರುವ ಪ್ರೀತಮ್ ಮತ್ತು ನಂದಿನಿ ಸುತ್ತ ಕಥೆ ಹೆಣೆಯಲಾಗಿದೆ. ಮೊದಲಿಗೆ ಒಬ್ಬರನ್ನು ಕಂಡರೇ ಒಬ್ಬರಿಗೆ ಆಗದೆ ಕಾಲಾನಂತರ ಇಬ್ಬರು ಪ್ರೀತಿಯಲ್ಲಿ ಬೀಳುತ್ತಾರೆ. ನಂದಿನಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಾಗ ಪ್ರೀತಮ್ ತಿರಸ್ಕರಿಸುತ್ತಾನೆ. ಮುಂದೇ ಏನಾಗುತ್ತದೆ ಎಂಬ ಕುತೂಹಲ ‘ಲವ್ ಪಂಚ್’ ಹುಟ್ಟಿಸಿದೆ.
ಸೀರೆ ಉಟ್ಟು ಸಾಂಪ್ರಾದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಮೌನ ಗುಡ್ಡೆಮನೆ ಮೈಕ್ರೋ ಸರಣಿ ‘ಲವ್ ಪಂಚ್’ ನಲ್ಲಿ ರಗಡ್ ಲುಕ್ ತಳೆದಿದ್ದಾರೆ.
—-





Be the first to comment