ವೈರಲ್ ಆದ ರವಿಮಾಮ ಹೇಳಿಕೆ

“ಈ ಜೀವನದಲ್ಲಿ ನಿಮ್ಮನ್ನು ಮರೆಯೋದಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ” ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಗ್ಗೆ ಹೇಳಿರುವ ಹೇಳಿಕೆ ವೈರಲ್ ಆಗಿದೆ.

ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದ ಕಷ್ಟದ ಸಮಯದಲ್ಲಿ ತಮ್ಮ ಕೈ ಹಿಡಿದ ವ್ಯಕ್ತಿ ಡಿಕೆ ಶಿವಕುಮಾರ್ ಎಂದು ಹೇಳಿದರು.

“ಮನುಷ್ಯನ ಜೀವನದಲ್ಲಿ ಕೆಲ ಕಟ್ಟ ಗಳಿಗೆಗಳು ಬರುತ್ತವೆ. ಆ ಸಮಯದಲ್ಲಿ ಯಾರು ನಮ್ಮ ಜೊತೆಗೆ ನಿಲ್ಲುತ್ತಾರೆ ಅನ್ನೋದು ಮುಖ್ಯ. ನಾನು ಯಾರ ಮುಂದೂ ಕೈಚಾಚುವ ವ್ಯಕ್ತಿ ಅಲ್ಲ. ಆದರೆ ನಾನು ಕೈಚಾಚುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್” ಎಂದರು.

“ನಾನು ಬಿದ್ದಾಗ ಜನ ನನ್ನ ಕೈಬಿಟ್ಟಿಲ್ಲ. ‘ರಾಮಾಚಾರಿ’ ಸಮಯದಲ್ಲೂ ಜನ ಪ್ರೀತಿ ಕಡಿಮೆ ಮಾಡಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಮಾಡಿದ ಸಹಾಯ ನನ್ನ ಜೀವನದಲ್ಲಿ ಮರೆಯಲಾಗದದ್ದು” ಎಂದರು ರವಿಮಾಮ.

ಮದ್ದೂರು ಶಾಸಕ ಉದಯ್ ಅವರ ಸಹಾಯ ನೆನಪಿಸಿಕೊಂಡ ರವಿಚಂದ್ರನ್, “ಅವರು ನನಗೆ ಗೊತ್ತಾಗದಂತೆ ಸಹಾಯ ಮಾಡಿದ್ದಾರೆ. ಸ್ನೇಹ ಮತ್ತು ಪ್ರೀತಿಗೆ ಮಾತ್ರ ನಾನು ತಲೆಬಾಗುತ್ತೇನೆ” ಎಂದು ತಿಳಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!