ಕನ್ನಡದ ನಟಿ ಶ್ರೀಲೀಲಾ ಅವರ ಮೊದಲ ಹಿಂದಿ ಸಿನಿಮಾ ಶೂಟಿಂಗ್ ವಿಳಂಬವಾಗಿ ನಿರಾಸೆ ಮೂಡಿಸಿದೆ.
ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಿ ಖ್ಯಾತ ನಿರ್ದೇಶಕ ಅನುರಾಗ್ ಬಸು ನಿರ್ದೇಶನದ ಮೂಲಕ ಶ್ರೀಲೀಲಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಚಿತ್ರೀಕರಣ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಚಿತ್ರ ಘೋಷಣೆಗೊಂಡು ಸುಮಾರು ಒಂದೂವರೆ ವರ್ಷವಾದರೂ ಚಿತ್ರೀಕರಣ ಇನ್ನೂ ಪೂರ್ಣಗೊಳ್ಳದಿರುವುದು ಚಿತ್ರ ಬಿಡುಗಡೆಗೆ ವಿಘ್ನ ಆಗಿ ಕಾಡಿದೆ.
ಚಿತ್ರತಂಡ 45 ದಿನಗಳ ಚಿತ್ರೀಕರಣ ಮಾತ್ರ ನಡೆಸಿದೆ. ಇನ್ನೂ ಬಹುಭಾಗ ಚಿತ್ರೀಕರಣ ಬಾಕಿಯಿದೆ ಎಂದು ಅನುರಾಗ್ ಬಸು ತಿಳಿಸಿದ್ದಾರೆ. ಈ ಕಾರಣದಿಂದ ಸಿನಿಮಾ ಬಿಡುಗಡೆ ಈ ವರ್ಷ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಈ ಸಿನಿಮಾಕ್ಕೆ ಮೊದಲಿಗೆ ‘ಆಶಿಖಿ 3’ ಎಂದು ಹೆಸರು ಇಡಲಾಗಿತ್ತು. ಆದರೆ ಕೆಲವು ವಿವಾದಗಳ ಬಳಿಕ ಆ ಶೀರ್ಷಿಕೆಯನ್ನು ಕೈಬಿಟ್ಟು ಚಿತ್ರದ ಹೊಸ ಹೆಸರಿನ ಕುರಿತು ಚರ್ಚೆಗಳು ಇನ್ನೂ ನಡೆಯುತ್ತಿವೆ.
ಈ ನಡುವೆ ಶೂಟಿಂಗ್ ವಿಳಂಬ ಚಿತ್ರತಂಡದ ಒಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಅನುಮಾನಗಳನ್ನು ಹುಟ್ಟಿಸಿದೆ. ಇದು ಶ್ರೀಲೀಲಾ ಅವರ ಬಾಲಿವುಡ್ ಎಂಟ್ರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ನಡುವೆ ಶ್ರೀಲೀಲಾ ಇನ್ನೂ ಎರಡು ಹಿಂದಿ, ಎರಡು ತಮಿಳು ಹಾಗೂ ಎರಡು ತೆಲುಗು ಸಿನಿಮಾಗಳಿಗೆ ಸಹಿ ಹಾಕಿದ್ದು ವೃತ್ತಿಜೀವನದಲ್ಲಿ ನಾಗಾಲೋಟ ಮುಂದುವರೆಸಿದ್ದಾರೆ.





Be the first to comment