‘ಧುರಂಧರ್ 2’ ಕಥೆ ತಮ್ಮದು ಎಂದು ಕಥೆ ಬರಹಗಾರ ಸಂತೋಷ್ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
‘ ಕಥೆಯನ್ನು ನಾನು ಹಲವು ನಿರ್ಮಾಣ ಸಂಸ್ಥೆಗಳಿಗೆ ವಿವರಿಸಿದ್ದೆ. ದೊಡ್ಡ ಮಟ್ಟದ ನಟರೊಂದಿಗೆ ಸಿನಿಮಾ ಮಾಡುವ ಯೋಜನೆಯೂ ಇತ್ತು. ಆದರೆ ನನ್ನ ಕಥೆಯನ್ನು ಕದ್ದು ಸಿನಿಮಾ ಮಾಡಿದ್ದಾರೆ’ ಎಂದು ಅವರು ಆರೋಪಿಸಿ ಸಂಚಲನ ಮೂಡಿಸಿದ್ದಾರೆ.
‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್ ತಮ್ಮ ಕಾನೂನು ತಂಡದೊಂದಿಗೆ ಚರ್ಚಿಸಿ ಸಂತೋಷ್ ಕುಮಾರ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
‘ನನಗೆ ಯಾವುದೇ ನೋಟಿಸ್ ಬಂದಿಲ್ಲ. ಮೌನವಾಗಿರಲು ಒತ್ತಡ ಹೇರಲಾಗುತ್ತಿದೆ. ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ’ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಕಥೆ ಕಳ್ಳತನದ ಪ್ರಕರಣ ಆರೋಪ ಗಂಭೀರಗೊಂಡಿದ್ದು, ಆಧಾರರಹಿತ ಆರೋಪಗಳನ್ನು ಮುಂದುವರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಂತೋಷ್ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶಕ ಆದಿತ್ಯ ಧರ್ ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.
‘ಧುರಂಧರ್ 2’ ಚಿತ್ರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವಾಗಲೇ ಈಗ ಸಿನಿಮಾ ಕಥೆಗೆ ಸಂಬಂಧಿಸಿದಂತೆ ಹೊಸ ವಿವಾದ ತಲೆದೋರಿದೆ.
—-





Be the first to comment