ಅಮಿತಾಭ್–ಕಮಲ್ ‘ಕಲ್ಕಿ 2898 ಎಡಿ’ ಫೋಟೋ ವೈರಲ್

‘ಕಲ್ಕಿ 2898 ಎಡಿ’ ಸೀಕ್ವೆಲ್ ಸಿನಿಮಾ ಶೂಟಿಂಗ್  ನ ಅಮಿತಾಭ್ ಬಚ್ಚನ್ –  ಕಮಲ್ ಹಾಸನ್  ಫೋಟೋ ವೈರಲ್ ಆಗಿದೆ.

‘ಕಲ್ಕಿ 2898 ಎಡಿ’ ಸೀಕ್ವೆಲ್ ಶೂಟಿಂಗ್ ಆರಂಭವಾದ ಬಗ್ಗೆ ಅಮಿತಾಭ್ ಬಚ್ಚನ್ ಸುಳಿವು ನೀಡಿದ್ದಾರೆ. ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ ಫೋಟೋವನ್ನು ಅಮಿತಾಭ್ ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಭಾನುವಾರ ಮನೆ ಮುಂದೆ ಅಭಿಮಾನಿಗಳನ್ನು ಭೇಟಿಯಾಗುವ ಅಮಿತಾಭ್ ಈ ಬಾರಿ ಶೂಟಿಂಗ್ ಕಾರಣಕ್ಕೆ ಹೈದರಾಬಾದ್‌ನಲ್ಲಿ ಇದ್ದುದರಿಂದ ಭೇಟಿ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿಅಶ್ವತ್ಥಾಮ ಪಾತ್ರದಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆದ ಬಳಿಕ ಸೀಕ್ವೆಲ್ ಬಗ್ಗೆ  ಕುತೂಹಲ ಹುಟ್ಟಿತ್ತು. ಸೀಕ್ವೆಲ್ ಗೆ ಅನೇಕ ಅಡೆತಡೆಗಳು ಎದುರಾದವು.  ದೀಪಿಕಾ ಪಡುಕೋಣೆ ಚಿತ್ರದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಚರ್ಚೆಗೆ ಕಾರಣವಾಯಿತು. ಸಿನಿಮಾ ನಿಲ್ಲಬಹುದು ಎಂಬ ವದಂತಿಯೂ ಹರಡಿತ್ತು.

ನಿರ್ದೇಶಕ ನಾಗ್ ಅಶ್ವಿನ್ ಮೆಗಾ ಬಜೆಟ್‌ನಲ್ಲಿ ರೂಪಿಸಿದ ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸಿನೆಸ್ ಮಾಡಿತ್ತು. ಕಥೆ ಮೊದಲ ಭಾಗದಲ್ಲಿ ಅರ್ಧಕ್ಕೆ ನಿಂತಿದ್ದು, ಮುಂದಿನ ಭಾಗದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!