ಸೀತಾರಾಮ್

ಸರಣಿ ಕೊಲೆಯ ತನಿಖೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’

ಚಿತ್ರ: ಸೆಕೆಂಡ್ ಕೇಸ್ ಆಫ್ ಸೀತಾರಾಮ್
ನಿರ್ದೇಶನ: ದೇವಿ ಪ್ರಸಾದ್ ಶೆಟ್ಟಿ
ನಿರ್ಮಾಪಕರು: ಸ್ವಾತಿಕ್ ಹೆಬ್ಬಾರ್, ದೇವಿ ಪ್ರಸಾದ್ ಶೆಟ್ಟಿ
ತಾರಾ ಬಳಗ: ವಿಜಯ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಸಾಗರ್ ಪುರಾಣಿಕ್ ಇತರರು
ರೇಟಿಂಗ್: 4

ವಯಸ್ಸಾದ ವ್ಯಕ್ತಿಗಳ ಸರಣಿ ಕೊಲೆ ನಡೆಯುವಾಗ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತನಿಖೆ ನಡೆಸಿದಾಗ ಸಿಗುವ ರಹಸ್ಯಗಳೇನು ಎಂಬುದನ್ನು ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ಸೆಕೆಂಡ್ ಕೇಸ್ ಆಫ್ ಸೀತಾರಾಮ್.

ಆನೆ ಗದ್ದೆ ಪೊಲೀಸ್ ಸ್ಟೇಷನ್ ನ ವ್ಯಾಪ್ತಿಯಲ್ಲಿ ವೃದ್ಧ ವ್ಯಕ್ತಿಯ ಕೊಲೆ ನಡೆಯುತ್ತದೆ. ಮುಂದೆ ಸರಣಿ ಕೊಲೆ ನಡೆದಾಗ ಈ ಬಗ್ಗೆ ತನಿಖೆಗೆ ಮುಂದಾದಾಗ ಪೊಲೀಸ್ ಅಧಿಕಾರಿಗೆ ಹಲವು ರಹಸ್ಯಗಳು ಗೊತ್ತಾಗುತ್ತವೆ. ತನ್ನ ಕುಟುಂಬ ಕೂಡ ಈ ಕೊಲೆಯ ಜಾಡಿನಲ್ಲಿ ಸಿಲುಕಿರುವುದು ಗೊತ್ತಾಗುತ್ತದೆ. ತನಿಖೆಯ ಬೆನ್ನತ್ತಿದ ಸೀತಾರಾಮ್ ಗೆ ಎದುರಾಗುವ ಸನ್ನಿವೇಶಗಳು, ತನಿಖೆಯಿಂದ ಸಿಗುವ ಉತ್ತರಗಳು ಏನು ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.

ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರು ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ತನಿಖಾ ಅಧಿಕಾರಿಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಉಷಾ ಭಂಡಾರಿ, ಸಾಗರ್ ಪುರಾಣಿಕ್, ಗೋಪಾಲಕೃಷ್ಣ ದೇಶಪಾಂಡೆ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗಮನ ಸೆಳೆಯುತ್ತಾರೆ.

ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಒಳ್ಳೆಯ ಮನೋರಂಜನೆ ನೀಡುತ್ತದೆ. ಚಿತ್ರಕ್ಕೆ ಪೂರಕವಾಗಿ ಹಿನ್ನೆಲೆ ಸಂಗೀತ ಹಾಗೂ ತಾಂತ್ರಿಕ ವರ್ಗ ಕೆಲಸ ಮಾಡಿದ್ದು ಗಮನ ಸೆಳೆಯುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!