‘ದಿ ಕೇರಳ ಸ್ಟೋರಿ 2’ಗೆ ಪಿಣರಾಯಿ ವಿಜಯನ್ ಎಚ್ಚರಿಕೆ

‘ದಿ ಕೇರಳ ಸ್ಟೋರಿ 2’ ಬಿಡುಗಡೆಗೂ ಮುನ್ನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಗಂಭೀರ ಎಚ್ಚರಿಕೆ ನೀಡಿದ್ದಾರೆ.

“ದ್ವೇಷ ಹುಟ್ಟಿಸುವ ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗದ ಬಿಡುಗಡೆಯ ವರದಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಮೊದಲ ಭಾಗದಲ್ಲಿ ಕೋಮುವಾದಿ ಅಜೆಂಡಾ ಮತ್ತು ಸ್ಪಷ್ಟ ಸುಳ್ಳುಗಳನ್ನು ನಾವು ನೋಡಿದ್ದೇವೆ. ನಮ್ಮ ಜಾತ್ಯತೀತ ರಚನೆಯನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವ ಈ ಸಿನಿಮಾವನ್ನು ಕೇರಳ ಜನತೆ ಮತ್ತೊಮ್ಮೆ ತಿರಸ್ಕರಿಸುತ್ತಾರೆ” ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

“ಕೋಮು ವೈಷಮ್ಯ ಪ್ರಚೋದಿಸುವ ಕಲ್ಪಿತ ನಿರೂಪಣೆಗಳು ಸುಲಭವಾಗಿ ಅಂಗೀಕರಿಸಲ್ಪಡುತ್ತಿವೆ. ಆದರೆ ಕಲೆಯ ವಿಮರ್ಶಾತ್ಮಕ ಅಭಿವ್ಯಕ್ತಿಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂಬುದು ಆಘಾತಕಾರಿ. ನಮ್ಮ ಸಾಮರಸ್ಯದ ಭೂಮಿಯನ್ನು ಭಯೋತ್ಪಾದನೆಯ ಕೇಂದ್ರದಂತೆ ಚಿತ್ರಿಸುವ ಪ್ರಯತ್ನಗಳ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲಬೇಕು. ಸತ್ಯ ಯಾವಾಗಲೂ ಗೆಲ್ಲುತ್ತದೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ‘ದಿ ಕೇರಳ ಸ್ಟೋರಿ 2’ ಟ್ರೇಲರ್ ಬಿಡುಗಡೆಯಾಗಿ  ವೈರಲ್ ಆಗಿದೆ.  ಹಿಂದೂ ಯುವತಿಯರನ್ನು ಮೋಸದಿಂದ ಪ್ರೀತಿ ಮತ್ತು ಮದುವೆಯ ಬಲೆಗೆ ಬೀಳಿಸಿ ಮತಾಂತರ ಮಾಡಲಾಗುತ್ತದೆ ಹಾಗೂ ಯುವತಿಯರು ಹಿಂಸೆ ಅನುಭವಿಸಬೇಕಾಗುತ್ತದೆ ಎಂಬ ಅಂಶಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಚಿತ್ರವನ್ನು ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣ ಮಾಡಿದ್ದಾರೆ.  ಅದಿತಿ ಭಾಟಿಯಾಐಶ್ವರ್ಯಾ ಊಜಾ ಮತ್ತು ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರ ಫೆಬ್ರವರಿ 27ರಂದು ಬಿಡುಗಡೆಯಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!