‘ಗ್ಯಾಮ್ಲಿಂಗ್ನಿಂದ ಹಣ ಕಳೆದುಕೊಂಡಿದ್ದು ನಿಜ. ಇದರಿಂದ ನಾನು ಮನೆ ಬಿಟ್ಟು ಹೊರಗೆ ಬರಬೇಕಾಯ್ತು. ಮೂರು ವರ್ಷಗಳಿಂದ ಫ್ಯಾಮಿಲಿಯಿಂದ ದೂರ ಇದ್ದೇನೆ’ ಎಂದು ನಟಿ ಕಾರುಣ್ಯ ರಾಮ್ ಸ್ವಂತ ತಂಗಿ ಸಮೃದ್ಧಿ ರಾಮ್ ಕಣ್ಣೀರಿಟ್ಟಿದ್ದಾರೆ.
ಕಾರುಣ್ಯ ರಾಮ್ ತಂಗಿ ಸಮೃದ್ಧಿ ರಾಮ್ ವಿರುದ್ಧ ಸಿಸಿಬಿಯಲ್ಲಿ 25 ಲಕ್ಷ ರೂ. ವಂಚನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಈ ಆರೋಪಗಳ ಬೆನ್ನಲ್ಲೇ ಸಮೃದ್ಧಿ ರಾಮ್ ಮಾಧ್ಯಮದ ಮುಂದೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
‘ ಗ್ಯಾಮ್ಲಿಂಗ್ನಲ್ಲಿ ಹಣ ಕಳೆದುಕೊಂಡು 3 ವರ್ಷಗಳಿಂದ ಮನೆಯಿಂದ ಆಚೆ ಇದ್ದೇನೆ. ಈಗಲೂ ಬೀದಿಯಲ್ಲೇ ನಿಂತು ಮಾತನಾಡ್ತಿದ್ದೀನಿ. 2023ರಲ್ಲಿ ನಾನು ಹಣ ಪಡೆದಿದ್ದೇನೆ. 2 ಲಕ್ಷ ರೂ. ಸಾಲ ತೀರಿಸಿದ್ದೇನೆ. ನನ್ನ ವಿರುದ್ಧ ಆರೋಪ ಮಾಡುವವರು ನನ್ನ ಹಾಗೂ ನನ್ನ ಅಕ್ಕನ ಮರ್ಯಾದೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನನಗೆ ಸಾಲ ನೀಡಿದವರು ಪರಿಚಿತ ಸ್ನೇಹಿತರೇ. 10–5% ಬಡ್ಡಿಗೆ ಸಾಲ ಪಡೆದುಕೊಂಡಿದ್ದೆ’ ಎಂದು ಹೇಳಿದ್ದಾರೆ.
‘ನಾನು ಮೊದಲು ದೂರು ಕೊಡಬೇಕಿತ್ತು. ಆದರೆ ಅಕ್ಕನ ಹೆಸರು ಮಧ್ಯಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಮೌನವಿಟ್ಟೆ. ಈಗ ನನ್ನ ಬದುಕೇ ಕಷ್ಟಕರವಾಗಿದೆ. ಪ್ರತಿಭಾ, ಕಪಿಲ್ ಗೆ ನಾನು ದುಡ್ಡು ಕೊಡೋದು ಬೇಕಾಗಿರಲಿಲ್ಲ. ನನ್ನ ಮತ್ತು ನನ್ನ ಅಕ್ಕನ ಮರ್ಯಾದೆ ತೆಗೆಯೋದ್ರಲ್ಲೇ ಅವರಿಗೆ ಮಜಾ ಇತ್ತು. ಅದಕ್ಕಾಗಿ ಪ್ಲ್ಯಾನ್ ಮಾಡ್ತಿದ್ರು. ಹೇಳಲು ಸಾಧ್ಯವಾಗದಷ್ಟು ಹಲ್ಕಾ ಭಾಷೆಯಲ್ಲಿ ಮೆಸೇಜ್ ಮಾಡ್ತಿದ್ರು. ನಾನು ರಿಪ್ಲೇ ಮಾಡುವಷ್ಟರಲ್ಲಿ ಬ್ಲಾಕ್ ಮಾಡಿಕೊಳ್ತಿದ್ರು. ಅದೆಲ್ಲವೂ ನನ್ನ ಬಳಿ ಇದೆ. ನಾನೊಬ್ಬಳೇ ತಪ್ಪು ಮಾಡಿದ್ದೀನಿ ಅನ್ನೋ ತರಹ ಮಾಡಿ ಬದುಕೋಕೆ ಆಗದಂತೆ ಮಾಡ್ತಿದ್ದಾರೆ’ ಎಂದು ಸಮೃದ್ಧಿ ರಾಮ್ ಭಾವುಕರಾಗಿದ್ದಾರೆ.
ಕಾರುಣ್ಯ ರಾಮ್ , ಸಮೃದ್ಧಿ ರಾಮ್ ಜೊತೆ ಪ್ರತಿಭಾ ಶೆಟ್ಟಿ, ಕಪಿಲ್, ಪ್ರಜ್ವಲ್, ರಕ್ಷಿತ್, ಸಾಗರ್ ಎಂಬುವವರ ವಿರುದ್ಧ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.
—–





Be the first to comment