ತಲೈವಾ ರಜನಿಕಾಂತ್ ನಟನೆಯ 173ನೇ ಸಿನಿಮಾ ‘ ತಲೈವರ್-173’ ಏಪ್ರಿಲ್‌ನಿಂದ ಶುರುವಾಗಲಿದೆ.
ಸಂಕ್ರಾಂತಿ ಹಬ್ಬದ ದಿನ ತಮ್ಮ ನಿವಾಸದ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ರಜನಿಕಾಂತ್ 173ನೇ ಸಿನಿಮಾ ಬಗ್ಗೆ ಬಿಗ್ ನ್ಯೂಸ್ ನೀಡಿದ್ದಾರೆ. ತಲೈವರ್-173 ಸಿನಿಮಾ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ ತಲೈವರ್-173’ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲಂಸ್ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ರಜನಿಕಾಂತ್ ನಟ, ಕಮಲ್ ಹಾಸನ್ ನಿರ್ಮಾಪಕರಾಗಿ ಕೈಜೋಡಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಈ ಸಿನಿಮಾಗೆ ಮೊದಲಿಗೆ ನಿರ್ದೇಶಕ ಸುಂದರ್.ಸಿ ಆಯ್ಕೆಯಾಗಿದ್ದು, ಚಿತ್ರದ ಘೋಷಣೆ ಆಗಿತ್ತು. ಆದರೆ ನಂತರ ಅವರು ಸಿನಿಮಾದಿಂದ ಹೊರ ಬಂದಿದ್ದರು. ಇದೀಗ ನಿರ್ದೇಶಕ ಸಿಬಿ ಚಕ್ರವರ್ತಿ ತಲೈವರ್-173 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಇದೇ ವರ್ಷ ಏಪ್ರಿಲ್‌ನಿಂದ ಆರಂಭಿಸುವ ಪ್ಲ್ಯಾನ್ ಮಾಡಲಾಗಿದೆ.
ರಜನಿಕಾಂತ್ ಅವರು ತಮ್ಮ ಚಿತ್ರದ ಬಗ್ಗೆ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿಯನ್ನು ಉಂಟು ಮಾಡಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಕುರಿತು ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.





Be the first to comment