‘ಧ್ರುವಂತ್’ ಮಿಡ್‌ ವೀಕ್‌ ಎಲಿಮಿನೇಟ್

‘ಬಿಗ್‌ಬಾಸ್‌ 12’  ಫಿನಾಲೆ ಹಂತಕ್ಕೆ ತಲುಪಿದ್ದು, ಕಳೆದ ವಾರ ಸೀಸನ್ ಕೊನೆಯ ಕಿಚ್ಚನ ಚಪ್ಪಾಳೆ ಪಡೆದಿದ್ದ ಧ್ರುವಂತ್ ಮನೆಯಿಂದ ಮಿಡ್‌ ವೀಕ್‌ ಎಲಿಮಿನೇಟ್ ಆಗಿದ್ದಾರೆ.

ಫಿನಾಲೆ ಸ್ಪರ್ಧಿ ಎನ್ನಲಾಗುತ್ತಿದ್ದ ಧ್ರುವಂತ್ ಮನೆಯಿಂದ ಮಿಡ್ ನೈಟ್ ಎಲಿಮಿನೇಟ್ ಆಗಿ ಮನೆಯಲ್ಲಿ ಗಿಲಿ ನಟ, ರಘು, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ, ಧನುಶ್  ಸೇರಿದಂತೆ 6 ಮಂದಿ ಸ್ಪರ್ಧಿಗಳಿದ್ದಾರೆ.ಮಿಡ್‌ ವೀಕ್‌ ಎಲಿಮಿನೇಷನ್‌ ಸಾಲಿನಲ್ಲಿ ಗಿಲ್ಲಿ, ರಘು, ರಕ್ಷಿತಾ, ಅಶ್ವಿನಿ, ಕಾವ್ಯ, ಧ್ರುವಂತ್‌ ಇದ್ದರು.

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಅವರು ಬಹುತೇಕ ಒಂಟಿಯಾಗಿ ಆಟ ಆಡಿದ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಿಸಿಕೊಳ್ಳದೆ ತಮ್ಮದೇ ಶೈಲಿಯಲ್ಲಿ ಆಡಿದ್ದರು. ಸೀಸನ್ ಮಧ್ಯಭಾಗದಲ್ಲಿ ಅವರು ಮಾನಸಿಕವಾಗಿ ಕುಗ್ಗಿ ತಾವಾಗಿಯೇ ಶೋ ತೊರೆಯುವ ನಿರ್ಧಾರಕ್ಕೂ ಬಂದಿದ್ದರು. ಆದರೆ  ಕಿಚ್ಚ ಸುದೀಪ್ ಅವರು ಧೈರ್ಯ ತುಂಬಿದ ಬಳಿಕ ಧ್ರುವಂತ್ ಮತ್ತೆ ಚುರುಕಾಗಿ ಆಟ ಆಡಿದ್ದರು. ಆದರೆ ವೋಟ್‌ಗಳ ಕೊರತೆಯಿಂದಾಗಿ ಅವರು ಎಲಿಮಿನೇಟ್ ಆಗಿದ್ದಾರೆ.

‘ಬಿಗ್‌ಬಾಸ್‌ 12’ ರ ಗ್ರಾಂಡ್ ಫಿನಾಲೆ ಶನಿವಾರ ಮತ್ತು ಭಾನುವಾರ  ನಡೆಯಲಿದೆ. ವೋಟ್​ ಲೈನ್​​ಗಳು ಈಗಾಗಲೇ ಓಪನ್ ಆಗಿದ್ದು, ಅಭಿಮಾನಿಗಳು  ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಓಟು ಹಾಕಲು ಆರಂಭಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!