ತೆಲುಗು ಬಿಗ್‌ ಬಾಸ್‌ ರನ್ನರ್ ಅಪ್ ಕನ್ನಡತಿ ತನುಜಾ

ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ತೆಲುಗು ಸೀಸನ್ 9ರ ಗ್ರ್ಯಾಂಡ್ ಫಿನಾಲೆಯಲ್ಲಿ ಕನ್ನಡತಿ ತನುಜಾ ಪುಟ್ಟಸ್ವಾಮಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

ಬಿಗ್ ಬಾಸ್ ತೆಲುಗು ಸೀಸನ್ 9ರ ವಿನ್ನರ್ ಆಗಿ ಕಲ್ಯಾಣ್ ಪದಾಲ ಟ್ರೋಫಿ ಗೆದ್ದರು. ಸಂಜನಾ ಗಲ್ರಾನಿ, ಇಮಾನ್ಯುಯೆಲ್, ತನುಜಾ ಪುಟ್ಟಸ್ವಾಮಿ ಸೇರಿದಂತೆ ಹಲವು ಪ್ರಬಲ ಸ್ಪರ್ಧಿಗಳನ್ನು ಕಲ್ಯಾಣ್ ಹಿಂದಿಕ್ಕಿದರು.

ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ಆಂಧ್ರಪ್ರದೇಶದ ವಿಜಯನಗರ ಮೂಲದ ಕಲ್ಯಾಣ್ ಪದಾಲ ಟ್ರೋಫಿಯ ಜೊತೆಗೆ 35 ಲಕ್ಷ ರೂ. ನಗದು ಬಹುಮಾನ ಮತ್ತು ಒಂದು ಎಸ್‌ಯುವಿ ಕಾರನ್ನೂ ಪಡೆದುಕೊಂಡಿದ್ದಾರೆ.  ಕಲ್ಯಾಣ್ಈ  ಹಿಂದೆ ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ತಮ್ಮ  ಶಿಸ್ತುಬದ್ಧ ಆಟದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ತೆಲುಗು ಬಿಗ್ ಬಾಸ್ 106 ದಿನಗಳ ಕಾಲ ನಡೆಯಿತು.  ಫಿನಾಲೆಗೆ ಕರ್ನಾಟಕದ ಇಬ್ಬರು ಸ್ಪರ್ಧಿಗಳು ಪ್ರವೇಶ ಪಡೆದಿದ್ದರು. ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಫಿನಾಲೆ ತಲುಪಿದ್ದು, ಈ ಕಾರಣದಿಂದ ತೆಲುಗು ಬಿಗ್ ಬಾಸ್ ಕನ್ನಡಿಗರ ಗಮನವನ್ನೂ ಸೆಳೆದಿತ್ತು.

ಕನ್ನಡದಲ್ಲಿ ‘6-5=3’ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ತನುಜಾ, ಬಳಿಕ ತೆಲುಗು ಮತ್ತು ತಮಿಳು ಟಿವಿ ಲೋಕದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ.  ತನುಜಾ   ಆರಂಭದಿಂದಲೇ ಸ್ಥಿರ ಆಟವಾಡುತ್ತಾ ಫಿನಾಲೆವರೆಗೂ ತಲುಪಿದರು.

ಸಂಜನಾ ಗಲ್ರಾನಿ ನೆಗೆಟಿವ್ ಅಂಶಗಳ ನಡುವೆಯೂ ಸಾಕಷ್ಟು ಪಾಸಿಟಿವ್ ಅಂಶಗಳ ಮೂಲಕ ಮೆಚ್ಚುಗೆ ಪಡೆದರು.

——

 

Be the first to comment

Leave a Reply

Your email address will not be published. Required fields are marked *

Translate »
error: Content is protected !!