ತೆಲುಗು ಬಿಗ್​​ಬಾಸ್ ಫಿನಾಲೆ ತಲುಪಿದ ಕನ್ನಡತಿ

ತೆಲುಗು ಬಿಗ್​​ಬಾಸ್ ಸೀಸನ್ 9 ಅಂತಿಮ ವಾರದಲ್ಲಿದ್ದು, ಕನ್ನಡತಿ ತನುಜಾ ಪುಟ್ಟಸ್ವಾಮಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

ಎಲ್ಲ ಆಟದಲ್ಲಿಯೂ ಹೆಚ್ಚಾಗಿ ಆಡಿದ ತನುಜಾ ಅವರು ಕೊನೆಯದಾಗಿ ಟಾಸ್ಕ್ ಗೆದ್ದು ಫಿನಾಲೆಗೆ ಹೋಗಿದ್ದಾರೆ. ತನುಜಾ ಪುಟ್ಟಸ್ವಾಮಿ ಕನ್ನಡದ ನಟಿಯಾಗಿದ್ದು, ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತನುಜಾಗೆ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಬಿಗ್​​ಬಾಸ್​​ನಲ್ಲಿ ಚೆನ್ನಾಗಿ ಆಡುತ್ತಾ ಬರುತ್ತಿರುವ ಅವರಿಗೆ ತೆಲುಗು ಪ್ರೇಕ್ಷಕರು ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ. ತನುಜಾ ಗೆಲ್ಲುವ ಸಾಧ್ಯತೆ ಇದೆ.

ಈ ಸೀಸನ್​​ನಲ್ಲಿ ಇಬ್ಬರು ಕನ್ನಡತಿಯರು ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ತನುಜಾ ಪುಟ್ಟಸ್ವಾಮಿ ಮತ್ತು ಸಂಜನಾ ಗಲ್ರಾನಿ ಅವರು ತೆಲುಗು ಬಿಗ್​​ಬಾಸ್ ಸೀಸನ್  9ರಲ್ಲಿ ಭಾಗವಹಿಸಿದ್ದಾರೆ.  ಇನ್ನುಸಂಜನಾ ಫಿನಾಲೆ ತಲುಪುತ್ತಾರೆಯೇ ಇಲ್ಲವೇ ಎಂಬ ಅನುಮಾನ ಮೂಡಿದೆ. ಸಂಜನಾಗೆ ಪೈಪೋಟಿಯಾಗಿ ಇಮಾನ್ಯುಯೆಲ್ ಇದ್ದಾರೆ. ಅವರು  ಚೆನ್ನಾಗಿ ಆಟ ಆಡುತ್ತಿದ್ದಾರೆ.  ಅವರ ಜೊತೆಗೆ ಭರಣಿ ಮತ್ತು ಸುಮನ್ ಸಹ ಇದ್ದು, ಈ ಇಬ್ಬರೂ ಸಹ ಈ ವಾರ ಎಲಿಮಿನೇಟ್ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಅಲ್ಲಿಗೆ  ಸಂಜನಾ ಹಾಗೂ ಇಮಾನ್ಯುಯೆಲ್ ನಡುವೆ ಸ್ಪರ್ಧೆ ಏರ್ಪಡಲಿದೆ.

ತೆಲುಗು ಬಿಗ್​​ಬಾಸ್  ಅಂತಿಮ ವಾರದಲ್ಲಿದ್ದು, ವಿನ್ನರ್ ಘೋಷಣೆಗೆ ಇನ್ನೊಂದು ವಾರ ಬಾಕಿ ಇದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!