ಚಿತ್ರ: ಕೆಂಪು ಹಳದಿ ಹಸಿರು
ನಿರ್ದೇಶನ: ಮಣಿ ಕಾರ್ತಿಕೇಯನ್
ನಿರ್ಮಾಪಕ: ಪ್ರಸಾದ್ ಕುಮಾರ್ ನಾಯಕ್
ತಾರಾ ಬಳಗ: ಶ್ರೀ ಹಾನ್, ದಿವ್ಯ ಸುರೇಶ್, ಅರವಿಂದ್ ಬೋಳಾರ್, ಶೈಲಾಶ್ರೀ ಮೂಲ್ಕಿ, ಮಾನಸ್ ಇತರರು
ರೇಟಿಂಗ್ : 3
ಸುಗಮ ಸಂಚಾರಕ್ಕಾಗಿ ಕೆಂಪು, ಹಳದಿ, ಹಸಿರಿನ ಟ್ರಾಫಿಕ್ ಸಿಗ್ನಲ್ ಇರುತ್ತದೆ. ಅಂತೆಯೇ ಬದುಕಿನಲ್ಲಿ ಮುಂದೆ ಹೋಗುವ ಮುನ್ನ ಎಚ್ಚರ ಇರಬೇಕು. ಸರಿಯಾಗಿ ಯೋಚಿಸಿ ಮುಂದಕ್ಕೆ ಹೆಜ್ಜೆ ಇಡಬೇಕು ಎನ್ನುವ ಚಿತ್ರ ಈ ವಾರ ತೆರೆಗೆ ಬಂದಿರುವ ಕೆಂಪು ಹಳದಿ ಹಸಿರು.
ಚಿತ್ರದಲ್ಲಿ ಶೀರ್ಷಿಕೆ ಇರುವಂತೆ ಮೂರು ಪ್ರಮುಖ ಪಾತ್ರಗಳಿವೆ. ಈ ಮೂವರು ಮಾರ್ಟ್ ನಲ್ಲಿ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇವರ ನಡುವೆ ಒಬ್ಬ ಅನಾಮಧೇಯ ವ್ಯಕ್ತಿ ಬಂದು ಆಫರ್ ನೀಡುತ್ತಾನೆ. ಮುಂದೆ ಇವರ ಬದುಕಿನಲ್ಲಿ ಏನಾಗುತ್ತದೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರಕ್ಕೆ ಸ್ಟಾಪ್ ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್ ಎನ್ನುವ ಅಡಿಬರಹ ಇದೆ. ಇದರ ಸಾರಾಂಶದಂತೆ ಚಿತ್ರ ಮುಂದಕ್ಕೆ ಸಾಗುತ್ತದೆ. ಚಿತ್ರವನ್ನು ನಿರ್ದೇಶಕರು ನಿಗೂಢವಾಗಿ ಕಟ್ಟಿಕೊಡುವ ಯತ್ನವನ್ನು ಮಾಡಿದ್ದಾರೆ.
ಮಂಗಳೂರಿನಲ್ಲಿ ಚಿತ್ರ ಬಹುತೇಕ ನಡೆಯುತ್ತದೆ. ಅರವಿಂದ ಬೋಳಾರ್ ನಗುವನ್ನು ಪ್ರೇಕ್ಷಕರಲ್ಲಿ ತರುವ ಯತ್ನ ಮಾಡಿದ್ದಾರೆ. ಬಿಗ್ ಬಾಸ್ ಸ್ಪರ್ದಿ ದಿವ್ಯ ಸುರೇಶ್ ಇವರೇನಾ ಎನ್ನುವಷ್ಟು ಚಿತ್ರದಲ್ಲಿ ಬದಲಾವಣೆಯಾಗಿ ಕಾಣುತ್ತಾರೆ.
ಚಿತ್ರದ ಒಂದೆರಡು ಹಾಡುಗಳು ಗುನುಗುವಂತಿವೆ. ಬಿಗಿಯಾದ ಸ್ಕ್ರಿಪ್ಟ್ ಇದ್ದಿದ್ದರೆ ಚಿತ್ರ ಇನ್ನಷ್ಟು ಪ್ರೇಕ್ಷಕರಿಗೆ ಹತ್ತಿರ ಆಗುವ ಸಾಧ್ಯತೆ ಇರುತ್ತಿತ್ತು.





Be the first to comment