ʻಬಿಗ್ ಬಾಸ್ʼ ಮನೆಯಿಂದ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದಾಗಿ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಈ ಬಗ್ಗೆ ʻಬಿಗ್ ಬಾಸ್ʼ ಅಥವಾ ʻಕಲರ್ಸ್ ಕನ್ನಡʼ ವಾಹಿನಿಯಲ್ಲಿ ಯಾವುದೇ ಅಧಿಕೃತ ಅಪ್ಡೇಟ್ ಇಲ್ಲ. ಈ ಬಗ್ಗೆ ಇಂದಿನ (ಅ.29) ಎಪಿಸೋಡ್ನಲ್ಲಿ ಸತ್ಯ ಗೊತ್ತಾಗಲಿದೆ.
ʻಬಿಗ್ ಬಾಸ್ ಕನ್ನಡ ಸೀಸನ್ 12ʼರ ಮೊದಲ ವಾರದಲ್ಲಿ ಆರ್ಜೆ ಅಮಿತ್ ಮತ್ತು ಕರಿಬಸಪ್ಪ ಜಂಟಿಯಾಗಿ ಎಲಿಮಿನೇಟ್ ಆಗಿದ್ದರು. ಮೂರನೇ ವಾರ ಮಿಡ್ ವೀಕ್ ಎಲಿಮಿನೇಷನ್ನಿಂದ ಡಾಗ್ ಸತೀಶ್ ಮನೆಯಿಂದ ಹೊರಬಂದಿದ್ದರು. ಮಿನಿ ಫಿನಾಲೆಯಲ್ಲಿ ಮಂಜು ಭಾಷಿಣಿ ಹಾಗೂ ಅಶ್ವಿನಿ ಎಸ್.ಎನ್ ಎಲಿಮಿನೇಟ್ ಆದರು. ಇದೀಗ ಮಲ್ಲಮ್ಮ ಅವರು ʻಬಿಗ್ ಬಾಸ್ʼ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 28ರಂದು ʻಬಿಗ್ ಬಾಸ್ ಕನ್ನಡ ಸೀಸನ್ 12ʼ ರ ಮೂರನೇ ಸ್ಪರ್ಧಿಯಾಗಿ ದೊಡ್ಮನೆಗೆ ಮಲ್ಲಮ್ಮ ಎಂಟ್ರಿ ನೀಡಿದರು. ಮಲ್ಲಮ್ಮ ʻಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಡ್ತಾರೆ ಅನ್ನೋ ಸುಳಿವು ಯಾರಿಗೂ ಇರಲಿಲ್ಲ. ಅವರ ಎಂಟ್ರಿ ಸರ್ಪ್ರೈಸ್ ಆಗಿತ್ತು.
—–





Be the first to comment