ಶನಿವಾರ ಬಿಗ್ ಬಾಸ್ 4 ಸ್ಪರ್ಧಿಗಳ ಹೆಸರು ಬಹಿರಂಗ

ಬಿಗ್ ಬಾಸ್ ಕನ್ನಡ ಸೀಸನ್ 12’ರ ನಾಲ್ಕು ಸ್ಪರ್ಧಿಗಳ ಹೆಸರನ್ನು ಶನಿವಾರ ಬಹಿರಂಗಪಡಿಸಲಾಗುವುದು ಎಂದು ತಿಳಿದು ಬಂದಿದೆ.

ಜನಪ್ರಿಯ ಕೂಕಿಂಗ್ ಶೋ ‘ಕ್ವಾಟ್ಲೆ ಕಿಚನ್’ ಫಿನಾಲೆ ಶನಿವಾರ ನಡೆಯಲಿದೆ. ಈ ಫಿನಾಲೆಯನ್ನು ಹೆಚ್ಚು ಆಕರ್ಷಕವಾಗಿಸಲು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಾಲ್ಕು ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಲು ತಂತ್ರ ರೂಪಿಸಲಾಗಿದೆ. ಈ ನಿರ್ಧಾರದಿಂದ ಬಿಗ್ ಬಾಸ್ ಪ್ರಿಯರು ‘ಕ್ವಾಟ್ಲೆ ಕಿಚನ್’ ಕಡೆಗೂ ಗಮನ ಹರಿಸುವ ನಿರೀಕ್ಷೆ ಇದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲೂ ಇದೇ ರೀತಿಯ ತಂತ್ರವನ್ನು ಬಳಸಲಾಗಿತ್ತು. ಆಗ ‘ರಾಜ ರಾಣಿ’ ಶೋನ ಫಿನಾಲೆಯಲ್ಲಿ 4 ಸ್ಪರ್ಧಿಗಳ ಹೆಸರನ್ನು ಘೋಷಿಸಲಾಗಿತ್ತು. ‘ಕ್ವಾಟ್ಲೆ ಕಿಚನ್’ ಫಿನಾಲೆಯಲ್ಲಿ ಶರ್ಮಿಳಾ, ಕಾವ್ಯಾ, ದಿಲೀಪ್ ಶೆಟ್ಟಿ, ರಘು, ಚಂದ್ರು, ಚಂದನ್ ಸ್ಪರ್ಧಿ,  ವಿಶೇಷ ಅತಿಥಿಗಳಾಗಿ ರಾಜ್ ಬಿ. ಶೆಟ್ಟಿ ಮತ್ತು ಶನೀಲ್ ಗೌತಮ್ ಆಗಮಿಸಲಿದ್ದಾರೆ.

ಬಿಗ್ ಬಾಸ್‌ಗೆ ಹೋಗುವವರ ಹೆಸರುಗಳನ್ನು ಗುಟ್ಟಾಗಿ ಇಡುವುದು ಕಷ್ಟ. ಬಹುತೇಕ ಹೆಸರುಗಳು ಮೊದಲೇ ಲೀಕ್ ಆಗುವ ಸಾಧ್ಯತೆ ಇರುವುದರಿಂದ ಈ ಬಾರಿ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ  ಕೆಲ ಹೆಸರನ್ನು ಬಹಿರಂಗಪಡಿಸಲು ನಿರ್ಧರಿಸಲಾಗಿದೆ. ಇದರಿಂದ ‘ಕ್ವಾಟ್ಲೆ ಕಿಚನ್’ಗೂ ಮೈಲೇಜ್ ಸಿಗಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12’ ಗ್ರ್ಯಾಂಡ್ ಓಪನಿಂಗ್ ಸೆ. 28ರಂದು ಸಂಜೆ 6 ಗಂಟೆಗೆ ನಡೆಯಲಿದೆ.   17-18 ಸ್ಪರ್ಧಿಗಳು  ಬಿಗ್ ಬಾಸ್  ಪ್ರವೇಶಿಸಲಿದ್ದಾರೆ. ಈ ಬಾರಿ ಬಿಗ್ ಬಾಸ್ ಕನ್ನಡವನ್ನು ಜಿಯೋ ಹಾಗೂ ಹಾಟ್‌ಸ್ಟಾರ್‌ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!