ಚಿತ್ರ : ಹಚ್ಚೆ
ನಿರ್ದೇಶನ ಹಾಗೂ ನಿರ್ಮಾಣ : ಯಶೋಧರ
ತಾರಾ ಬಳಗ : ಅಭಿಮನ್ಯು, ಆದ್ಯಪ್ರಿಯಾ, ಅನುಪ್ರೇಮ, ಗುರುರಾಜ್ ಹೊಸಕೋಟೆ, ಇತರರು
ರೇಟಿಂಗ್ : 3/5
ವಾಸ್ತವಿಕತೆಯ ಕಥೆಯೊಂದಿಗೆ ಪುನರ್ಜನ್ಮದ ನಂಟಿನ ಕುರಿತು ಹೇಳುವ ಚಿತ್ರ ಈ ವಾರ ತೆರೆಗೆ ಬಂದಿರುವ ಹಚ್ಚೆ.
ಯುಗಗಳು ಕಳೆದರೂ ಪುನರ್ ಜನ್ಮದ ನಂಟು ಹಿಂಬಾಲಿಸುತ್ತದೆ ಎನ್ನುವ ಅಂಶವನ್ನು ಚಿತ್ರದಲ್ಲಿ ಹೇಳುವ ಯತ್ನವನ್ನು ಮಾಡಲಾಗಿದೆ. ಜೊತೆಗೆ ಇಲ್ಲಿ ವಾಸ್ತವಿಕ ಪ್ರಪಂಚದಲ್ಲಿ ನಡೆಯುವ ಪ್ರೀತಿ, ವಂಚನೆ, ಸ್ನೇಹ, ಭೂಗತ ಜಗತ್ತಿನ ಕಥೆಗಳು ಅನಾವರಣ ಆಗುತ್ತವೆ.
ಮೆಕ್ಯಾನಿಕ್ ಆಗಿ ಕೆಲಸ ಮಾಡುವ ನಾಯಕನಿಗೆ ವೈರಿಗಳನ್ನು ಸದೆಬಡೆಯುವುದೇ ಕೆಲಸ. ಇನ್ನು ನಾಯಕಿಗೆ ವರದಿಗಾರ್ತಿಯಾಗಿ ಸಮಾಜದಲ್ಲಿ ನಡೆಯುವ ದುಷ್ಟ ಕೃತ್ಯಗಳ ಬಗ್ಗೆ ಬೆಳಕು ಚೆಲ್ಲುವ ಆಸೆ. ಪುನರ್ಜನ್ಮದ ಕಥೆಯೊಂದಿಗೆ ಈ ಎಲ್ಲಾ ಪಾತ್ರಗಳು ಒಂದಕ್ಕೊಂದು ಬೆಸೆಯುತ್ತಾ ಹೋಗುತ್ತವೆ. ಇವುಗಳ ನಡುವಿನ ಸಂಬಂಧ ಏನು ಎನ್ನುವುದನ್ನು ನೋಡಲು ಚಿತ್ರವನ್ನು ನೋಡಬೇಕಿದೆ.
ನಾಯಕಿ ಪಾತ್ರವನ್ನು ಆದ್ಯಪ್ರಿಯ ಸಮರ್ಥವಾಗಿ ನಿರ್ವಹಿಸಿದ್ದಾರೆ. ನಾಯಕನ ಪಾತ್ರದಲ್ಲಿ ಅಭಿಮನ್ಯು ಸ್ವಲ್ಪ ಪಳಗಬೇಕಿದೆ ಎಂದು ಅನಿಸುತ್ತದೆ. ಚಿತ್ರದ ಇತರ ಕಲಾವಿದರು ಕಥೆಯ ಓಟಕ್ಕೆ ಸಾಥ್ ನೀಡುವ ಯತ್ನ ಮಾಡಿದ್ದಾರೆ.
ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟ ಆಗಬಹುದು.
—





Be the first to comment