ರಚಿತಾ ರಾಮ್

ಕೂಲಿ ಚಿತ್ರದಲ್ಲಿ ರಚಿತಾ ರಾಮ್

ರಜನಿಕಾಂತ್ ನಟನೆ ಮತ್ತು ಲೋಕೇಶ್ ಕನಕರಾಜ್ ನಿರ್ದೇಶನದ ಮೆಗಾ ಪ್ಯಾನ್-ಇಂಡಿಯಾ ಚಿತ್ರ ‘ಕೂಲಿ’ಯಲ್ಲಿ ನಟಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

ಕೂಲಿ ಚಿತ್ರವು ರಚಿತಾ ಅವರ ಚೊಚ್ಚಲ ತಮಿಳು ಚಿತ್ರವಾಗಿದ್ದು,  ಕೂಲಿ ಚಿತ್ರದಲ್ಲಿ ನಟಿಸುವ ಕುರಿತು ಎದ್ದಿದ್ದ ವದಂತಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ನಲ್ಲಿ  ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

ಕೂಲಿ ಚಿತ್ರವನ್ನು  ₹400 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಕನ್ನಡದ ನಟ ಉಪೇಂದ್ರ, ಅಮೀರ್ ಖಾನ್, ಸತ್ಯರಾಜ್, ನಾಗಾರ್ಜುನ ಮತ್ತು ಶ್ರುತಿ ಹಾಸನ್ ಇದ್ದಾರೆ.

ಕೂಲಿ ಚಿತ್ರದಲ್ಲಿ ರಚಿತಾ ನೆಗೆಟಿವ್ ಶೇಡ್ ಇರುವ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಟ್ರೇಲರ್ ಅವರ ಪಾತ್ರದ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ.  ಅವರ ಹೆಸರು ಮುಖ್ಯ ಕ್ರೆಡಿಟ್‌ಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಚಿತ್ರದ ಪ್ರಚಾರಗಳಿಗೂ ಗೈರಾಗಿದ್ದರು. ಇದು ಅವರ ಪಾತ್ರಕ್ಕೆ ಮತ್ತಷ್ಟು ನಿಗೂಢತೆಯನ್ನು ಸೇರಿಸಿದೆ.

ಆಗಸ್ಟ್ 14 ರಂದು ಚಿತ್ರ ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ನಿರ್ಮಿಸಿರುವ ಕೂಲಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ,  ಗಿರೀಶ್ ಗಂಗಾಧರನ್ ಛಾಯಾಗ್ರಹಣವಿದೆ.

ಕಲ್ಯಾಣ್ ದೇವ್ ನಟನೆಯ ಸೂಪರ್ ಮಚ್ಚಿ (2022) ಮೂಲಕ ರಚಿತಾ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸದಿದ್ದರೂ ರಚಿತಾ ತಮ್ಮ ನಟನೆಗೆ ಪ್ರಶಂಸೆ ಗಳಿಸಿದ್ದರು.

—–

This Article Has 5 Comments
  1. Pingback: cheapest buy androxal cheap store

  2. Pingback: online order enclomiphene purchase tablets

  3. Pingback: how to order xifaxan buy adelaide

  4. Pingback: buying staxyn generic prices

  5. Pingback: buy dutasteride usa overnight delivery

Leave a Reply

Your email address will not be published. Required fields are marked *

Translate »
error: Content is protected !!